March 24, 2026

ಕಾರ್ಕಳ: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕೃಷಿಕ

0
image_editor_output_image681201033-1663125816618

ಕಾರ್ಕಳ ಪ್ರಗತಿಪರ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63 ವರ್ಷ) ಅವರು ತಮ್ಮ ನಿವಾಸದಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ಈ ಕ್ರತ್ಯ ಎಸಗಿದ್ದಾರೆ. ಪತ್ನಿ ಚಾ ಮಾಡಲೆಂದು ಅಡುಗೆ ಕೊಠಡಿ ಪ್ರವೇಶಿದ್ದ ವೇಳೆ ಗುಂಡಿನ ಸದ್ದು ಕೇಳಿಬಂದಿದ್ದು, ಹೊರಗೆ ಬಂದು ನೋಡುವಾಗ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗಗೊಂಡಿದೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಸಾವಯವ ಕೃಷಿಕಯಲ್ಲಿ ತೊಡಗಿಸಿಕೊಂಡಿದ್ದರು.

ತನ್ನ ಜಮೀನಿನಲ್ಲಿ ಸಾವಯವ ತರಕಾರಿ ಬೆಳೆಯುತಿದ್ದರು. ಆತ್ಮಹತ್ಯೆಗೆ ಆರ್ಥಿಕ ಅಡಚಣೆ ಕಾರಣ ಎಂದು ಹೇಳಲಾಗುತಿದ್ದು. ಖಚಿತ ಮಾಹಿತಿ ತನಿಖೆಯಿಂದಷ್ಟೆ ಬಹಿರಂಗವಾಗಬೇಕಿದೆ. ಪೊಲೀಸರು ಘಟನೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!