December 19, 2025

ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಭೆ

0
IMG-20211108-WA0003.jpg

ಸುಳ್ಯ: ಇತ್ತೀಚೆಗೆ ನಮ್ಮನ್ನಗಲಿದ ಕರ್ನಾಟಕದ ಖ್ಯಾತ ಚಲನಚಿತ್ರ ನಟರು ಹಾಗೂ ಸಮಾಜ ಸೇವಕರಾದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಗೂನಡ್ಕದ ಯುವಕರು ಏರ್ಪಡಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ಕಚೇರಿಯಲ್ಲಿ ಜರುಗಿತು.

ಫ್ರೆಂಡ್ಸ್ ಯೂತ್ ಕ್ಲಬ್ ಗೂನಡ್ಕ ಇದರ ಮಾಜಿ ಅಧ್ಯಕ್ಷರಾದ ಜಿ.ಜಿ.ನವೀನ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶೌವಾದ್ ಗೂನಡ್ಕರವರು ಸಂತಾಪ ಸೂಚಕ ನುಡಿಗಳನ್ನಾಡಿ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಸೇವೆಗಳನ್ನು ಸ್ಮರಿಸಿದರು.

ಈ ವೇಳೆ ಮಾಜಿ ಸೈನಿಕರಾದ ಮುಜಾಫರ್, ಪ್ರಮುಖರಾದ ರವಿಚಂದ್ರ ಗೂನಡ್ಕ, ಸಾಜಿದ್ ಐ.ಜಿ, ವಿನಯ್ ಕುಮಾರ್, ರಹೀಂ ಕೊಪ್ಪದಕಜೆ, ಬಾಲಚಂದ್ರ ದರ್ಖಾಸ್, ಹೇಮನಾಥ್, ಆರೀಫ್ ಟಿ.ಎ, ಆನಂದ ಪೆಲ್ತಡ್ಕ, ಶರೀಫ್ ಸುಳ್ಯ, ಹರ್ಷೀತ್ ಮುನ್ನ, ಜಯಚಂದ್ರ, ಮಧುಸೂದನ್, ಲಕ್ಷ್ಮಣ, ಸುರೇಶ್ ಪೇರಡ್ಕ, ನವೀನ್ ಕುಮಾರ್, ಗೋಪಾಲ, ಅವಿನಾಶ್, ಪ್ರವೀಣ್ ಕುಮಾರ್, ಕಾರ್ಯಪ್ಪ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮಡಿಕೇರಿಯಿದ ಮೂಡಬಿದ್ರೆಗೆ ತೆರಳುತ್ತಿದ್ದ ಹಲವು ಯುವಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದು ವಿಶೇಷವಾಗಿತ್ತು. ಇಜಾಸ್ ಗೂನಡ್ಕರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!