February 2, 2026

ಈಶ್ವರಮಂಗಳದಲ್ಲಿ ಅಮಾನುಷ ರೀತಿಯಲ್ಲಿ ಹಲ್ಲೆ: ಬಸ್ಸಿನಿಂದ ಪ್ರಯಾಣಿಕನಿಗೆ ಹಲ್ಲೆ ನಡೆಸಿ
ಕಾಲಿನಿಂದ ದೂಡಿ ಹಾಕಿದ ಕಂಡಕ್ಟರ್

0
image_editor_output_image865645102-1662568957005

ಈಶ್ವರಮಂಗಲ :ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯ ಪದವು ಕಡೆಗೆ ಸಂಜೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನ ಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ದೂಡಿ ಹಾಕಿದ ಘಟನೆ ಇಂದು ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ.

ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಪದಡ್ಕ ಹೋಗಲು ಬಸ್ಸನ್ನು ಹತ್ತಿದ್ದು, ಮದ್ಯಪಾನ ಮಾಡಿರುವುದನ್ನು ಗಮನಿಸಿದ ನಿರ್ವಾಹಕ ಕೃಷ್ಣಪ್ಪ ರವರನ್ನು ಕೈಯಿಂದ ದೂಡಿ ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ ಕೃಷ್ಣಪ್ಪ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಬಿದ್ದಿರುವ ಕೃಷ್ಣಪ್ಪರನ್ನು ನಿರ್ವಾಹಕ ಹಾಗೆ ಬಿಟ್ಟು ತೆರಳಿದ ತೆರಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!