August 17, 2026

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬೆಳ್ಳಂಬೆಳಗ್ಗೆ ಪುತ್ತೂರು ಮತ್ತು ಸುಳ್ಯದಲ್ಲಿ 32 ಕಡೆ ಎನ್ ಐ ಎ ದಾಳಿ

0
image_editor_output_image-1869602685-1662434336400

ಪುತ್ತೂರು: ಜಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ‌ ಇಳಿದಿರುವ ರಾಷ್ಟ್ರೀಯ ತನಿಖಾದಳ ಅಧಿಕಾರಿಗಳು ಇಂದು (ಸೆ.6)ರಂದು ಬೆಳ್ಳಂಬೆಳಗ್ಗೆ ಪುತ್ತೂರು ಮತ್ತು ಸುಳ್ಯದಲ್ಲಿ 32 ಕಡೆ ಮನೆ, ಕಟ್ಟಡಗಳಿಗೆ ದಾಳಿ ನಡೆಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಎನ್.ಐ.ಎ.ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎನ್.ಐ.ಎ. ಪೋಲೀಸ್ ಇದೀಗ ತನ್ನ ಕೆಲಸ ಆರಂಭ ಮಾಡಿದೆ.
ಪ್ರಮುಖವಾಗಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಗಂಭೀರವಾಗಿ ಸರಕಾರ ಪರಿಗಣಿಸಿ ಹೆಚ್ಚಿನ ತನಿಖೆಯ ದೃಷ್ಟಿಯಿಂದ ಕೇಂದ್ರದ ಎನ್.ಐ.ಎ.ಗೆ ವಹಿಸಿಕೊಡಲಾಗಿತ್ತು.
ಕರಾವಳಿಯಲ್ಲಿ ನಡೆಯುವ ಕೋಮು ಕೊಲೆಗೆ ಕಾರಣ ಮತ್ತು ಕೊಲೆಗಳಿಗೆ ಸಹಕಾರ ನೀಡುವ ಕೆಲವೊಂದು ಪ್ರಮುಖ ವಿಚಾರಗಳನ್ನು ಬೇರು ಸಹಿತ ಮಾಹಿತಿ ಪಡೆದು ಸರಕಾರಕ್ಕೆ ಒಪ್ಪಿಸುವ ಕ್ರಮಕ್ಕೆ ಎನ್.ಐ.ಎ ಮುಂದಾಗಿದ್ದು, ಈಗಾಗಲೇ ತನಿಖೆ ಆರಂಭಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!