ವಿಟ್ಲ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟ: 12 LEGEND ಮೇಗಿನಪೇಟೆ ತಂಡ ಚಾಂಪಿಯನ್

ವಿಟ್ಲ: ವಿಟ್ಲ ಬಿಲ್ಡಿಂಗ್ಸ್ ಮಾಲಕರು ಮತ್ತು ವರ್ಕರ್ಸ್ ವತಿಯಿಂದ ನಡೆದ ವಿಟ್ಲ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ 12 LEGEND ಮೇಗಿನಪೇಟೆ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ವಿ.ಎಚ್ ವಾರಿಯರ್ಸ್ ತಂಡ ಪಡೆದುಕೊಂಡಿದೆ. ವಿಶೇಷವಾಗಿ ವಿಟ್ಲ ಪೊಲೀಸ್ ಠಾಣೆ ಮತ್ತು ವಿಟ್ಲ ಮೆಸ್ಕಾಂ ತಂಡಗಳ ನಡುವೆ ಸೌಹಾರ್ಧ ಪಂದ್ಯಾಟ ನಡೆಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ನಿತಿನ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿಕೆಎಂ ಅಶ್ರಪ್, ಹಸೈನಾರ್ ನೆಲ್ಲಿಗುಡ್ಡೆ,
ಉದ್ಯಮಿಗಳಾದ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಕ್ಲಿಫರ್ಡ್ ವೇಗಸ್, ಇಕ್ಬಾಲ್ ಶೀತಲ್, ವಿ.ಎಚ್ ಅಶ್ರಫ್, ಶಾಕೀರ್ ಅಳಕೆಮಜಲು, ಹಮೀದ್ ಬದ್ರಿಯಾ, ಎಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ, ಉಬೈದ್ ವಿಟ್ಲ ಬಝಾರ್, ಫಾರೂಕ್ ಕೋಡಪದವು, ಅಬ್ದುಲ್ ರಹಿಮಾನ್ ದೀಪಕ್, ಅಬ್ದುಲ್ ರಹಿಮಾನ್ ಕುರುಂಬಳ, ಅಬೂಬಕ್ಕರ್ ಅನಿಲಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

