ಮಂಜೇಶ್ವರ ಸಿಪಿಐಎಂ ಪಕ್ಷದ ಹಿರಿಯ ಸಾಮಾಜಿಕ ಮುಖಂಡ ಅಬೂಬಕ್ಕರ್ ನಿಧನ
ಮಂಜೇಶ್ವರ: ತುಳುನಾಡಿನಲ್ಲಿ ಸಿಪಿಐ (ಎಂ) ಪಕ್ಷವನ್ನು ಕಟ್ಟಿ ಬೆಳೆಸಲು ನೇತೃತ್ವ ವಹಿಸಿದ ಹಿರಿಯ ಸಾಮಾಜಿಕ ನೇತಾರ ಎ ಅಬೂಬಕ್ಕರ್ (87) ಸ್ವಗೃಹದಲ್ಲಿ ನಿಧನರಾದರು. ಅಭಿವತ್ತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು.
ಪೈವಳಿಕೆ ಹುತಾತ್ಮರ ಒಡನಾಡಿಯಾಗಿದ್ದರೂ . ಇ.ಎಂ.ಎಸ್ , ಏಕೆಜಿ, ಪಾಚೇನಿ ಕುಂಞರಾಮನ್, ಇಂಬಚ್ಚಿ ಬಾವ, ಎಂ ವಿ ರಾಘವನ್, ಎಂ ರಾಮಣ್ಣ ರೈ, ಎಂ ವಿ ಗೋವಿಂದನ್ ಮಾಸ್ಟರ್, ಪಿ ಕರುಣಾಕರನ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಏಕೆಜಿ ಮತ್ತು ರಾಮಣ್ಣ ರೈ , ಟಿ ಗೋವಿಂದನ್, ಡಾ. ಎ ಸುಬ್ಬರಾವ್ , ಸಿ ಏಚ್ ಕುಂಞಂಬು ರವರ ಚುನಾವಣೆಯಲ್ಲಿ ತುಳುನಾಡಿನ ನೇತೃತ್ವ ವಹಿಸಿದ್ದರು.
ಸಿಪಿಐಎಂ ಪಕ್ಷದ ಲೋಕಲ್ ಕಾರ್ಯದರ್ಶಿ, ಕುಂಬಳೆ ,ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯರಾಗಿ ದೀರ್ಘಕಾಲ ದುಡಿದರು. ರೈತ ಸಂಘದ ಕಣ್ಣೂರ್ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು.




