August 12, 2026

ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ಬಾಲಕಿ ನಾಪತ್ತೆ: ಪೊಲೀಸರ ಸಮಯಪ್ರಜ್ಞೆಯಿಂದ ಹೆತ್ತವರ ಮಡಿಲು ಸೇರಿದ ಬಾಲಕಿ

0
image_editor_output_image312533721-1662177298685

ಮಂಗಳೂರು:  ಮಂಗಳೂರು ಪ್ರಧಾನಿ ಸಮಾವೇಶದಲ್ಲಿ 4 ನೇ ತರಗತಿಯ ಬಾಲಕಿಯೊಬ್ಬಳು ಕಳೆದುಹೋಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕೊನೆಗೆ ಮಂಗಳೂರು ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕಿಯನ್ನು ಪತ್ತೆ ಹಚ್ಚಿ ಪಾಲಕರ ಸುಪರ್ದಿಗೆ ಒಪ್ಪಿಸಿದರು.

ಮಂಗಳೂರು ನಗರದ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಜ್ಯೋತಿನಗರದ ಯುಮುನಕ್ಕ ಹಾಗೂ ದೇವಕಿ ದಂಪತಿಯ 10 ವರ್ಷದ ಬಾಲಕಿ ಪೂಜಾ ಮೇಟಿ ಮೋದಿ ಸಮಾವೇಶಕ್ಕೆ ಪೋಷಕರೊಂದಿಗೆ ಬಂದಿದ್ದಳು. ಆದರೆ ಅಚಾನಕ್ಕಾಗಿ ಜನಜಂಗುಳಿಯಲ್ಲಿ ಪೋಷಕರ ಕೈ ತಪ್ಪಿ ಹೋಗಿ ಆತಂಕ ಸೃಷ್ಟಿಸಿದ್ದಳು.

ಒಬ್ಬಂಟಿ ವಿದ್ಯಾರ್ಥಿನಿಯನ್ನು ಗಮನಿಸಿದ ಮಂಗಳೂರು ನಗರ ಸಂಚಾರಿ ಎಸಿಪಿ ಗೀತಾ ಕುಲಕರ್ಣಿ ಬಾಲಕಿಯನ್ನು ವಿಚಾರಿಸಿ ಪೋಷಕರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಒಪ್ಪಿಸಿದ್ದಾರೆ. ಪ್ರಧಾನಿ ಕಾರ್ಯಕ್ರಮದ ಭದ್ರತೆಯ ಒತ್ತಡದ ನಡುವೆಯೂ ಪುಟ್ಟ ಬಾಲಕಿಯನ್ನು ಪೋಷಕರ ಮಡಿಲಿಗೆ ಸೇರಿಸಿದ ಮಂಗಳೂರು ಪೊಲೀಸರ ಸಮಯೋಚಿತ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!