ಎಸ್.ಐ.ಸಿ ಕರ್ನಾಟಕ ತಾಯಿಫ್ ಸಮಿತಿ ವತಿಯಿಂದ ಚೇಲಕ್ಕಾಡ್ ಉಸ್ತಾದರ ಅನುಸ್ಮರಣೆ ಹಾಗು ಸನ್ಮಾನ ಸಮಾರಂಭ

ಸಮಸ್ತ ಇಸ್ಲಾಮಿಕ್ ಸೆಂಟರ್ SIC ಕರ್ನಾಟಕ ತಾಯಿಫ್ ಸಮಿತಿ ಇತರ ಆಶ್ರಯದಲ್ಲಿ ಇತ್ತೀಚಿಗೆ ನಮ್ಮನ್ನಗಲಿದ ಸೂಫಿ ವರ್ಯರೂ, ಪ್ರಮುಖ ಪಂಡಿತರೂ, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಕೋಶಾಧಿಕಾರಿಯೂ ಆದ ಶೈಖುನಾ ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್ ನ.ಮ ರವರ ಅನುಸ್ಮರಣೆ, ದುಃಅ ಮಜ್ಲಿಸ್ ಹಾಗು ಸನ್ಮಾನ ಸಮಾರಂಭ ಸಮಸ್ತ ಇಸ್ಲಾಮಿಕ್ ಸೆಂಟರ್ ತಾಯಿಫ್ ನಲ್ಲಿ ಜರಗಿತು.

ಹುಸೈನ್ ದಾರಿಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮುಖ್ಯ ಭಾಷಣ ಮಾಡಿದ ಬಹು ಶಾಫಿ ದಾರಿಮಿ ಉಸ್ತಾದರು ಶೈಖುನಾ ಚೇಲಕ್ಕಾಡ್ ಉಸ್ತಾದರ ಪಾಂಡಿತ್ಯ, ಜ್ಞಾನದ ಬಗ್ಗೆ ಅನುಸ್ಮರಿಸುತ್ತಾ ಚೇಲಕ್ಕಾಡ್ ಉಸ್ತಾದರ ಅಗಲಿಕೆಯು ನಮಗೆಲ್ಲ ತುಂಬಲಾರದ ನಷ್ಟ ಎಂದು ಉಸ್ತಾದರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು.
ಕರ್ನಾಟಕ ಸಮಸ್ತ ಇಸ್ಲಾಮಿಕ್ ತಾಯಿಫ್ ಸಮಿತಿ ಯ ಅದ್ಯಕ್ಷರಾದ ಬಹು ಹುಸೈನ್ ದಾರಿಮಿ ಉಸ್ತಾದರ ನೇತೃತ್ವದಲ್ಲಿ ದಿಕ್ರ್ ದುಃಅ ಮಜ್ಲಿಸ್ ನಡೆಯಿತು.
ಇದೇ ಸಂಧರ್ಭದಲ್ಲಿ SIC ಸಮಸ್ತ ಇಸ್ಲಾಮಿಕ್ ಸೆಂಟರ್ ತಾಯಿಫ್ ಇದರ ಉಪ ಘಟಕಗಳ ಕಾರ್ಯ ಚಟುವಟಿಕೆಗಳ ನೇತೃತ್ವ ವಹಿಸಿದ ಬಹು ಶಾಫಿ ದಾರಿಮಿ ಉಸ್ತಾದರನ್ನು SIC ಕರ್ನಾಟಕ ತಾಯಿಫ್ ಸಮಿತಿ ಇದರ ಅದ್ಯಕ್ಷ, ಹಾಗು ಕಾರ್ಯದರ್ಶಿ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಸ್ತಾದ್ ಬಹು ಶರೀಫ್ ಫೈಝಿ SIC ತಾಯಿಫ್ ಕೇಂದ್ರ ಸಮಿತಿ ಅಧ್ಯಕ್ಷರು ,ಮುನೀರ್ ಫೈಝಿ ರಿಯಾದ್,ಬಶೀರ್ SIC ತಾಯಿಫ್ ಕೇಂದ್ರ ಸಮಿತಿ ಚೇರ್ ಮನ್, ಲೆತೀಫ್ ಫರೂಕು, ಕೋಶಾಧಿಕಾರಿ SIC ತಾಯಿಫ್ ಕೇಂದ್ರ ಸಮಿತಿ ಸಭೆಯಲ್ಲಿ SIC ಕೇಂದ್ರ ಸಮಿತಿ ಹಾಗು ಕರ್ನಾಟಕ ಸಮಿತಿಯ ಸದಸ್ಯರು ಉಪಸ್ಥಿಯಿದ್ದರು.
ಕಾರ್ಯಕ್ರಮದಲ್ಲಿ SIC ಸಮಸ್ತ ಕರ್ನಾಟಕ ತಾಯಿಫ್ ಸಮಿತಿ ಕಾರ್ಯದರ್ಶಿ ಹಸೈನಾರ್ ಟಿ ಯಂ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ವರದಿ: ಅಬೂ ಅಯಾನ್ ಕೊಡಂಗಾಯಿ