April 5, 2025

ಹಂದಿ ಜ್ವರಕ್ಕೆ ತುಂಬು ಗರ್ಭಿಣಿ ಸಾವು

0

ಮೈಸೂರು: ರಾಜ್ಯದಲ್ಲಿ ಮಾರಕ ಎಚ್‌1 ಎನ್‌1 (ಹಂದಿ ಜ್ವರ ) ಸೋಂಕಿಗೆ ತುಂಬು ಗರ್ಭಿಣಿ ಬಲಿಯಾಗಿದ್ದಾರೆ. ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಇನ್ನೇನು ಹೆರಿಗೆ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಸೆ. 1 ರ ಗುರುವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೃತರನ್ನು ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಎಂದು ಗುರುತಿಸಲಾಗಿದೆ.

ಮೃತ ಛಾಯಾಗೆ 4 ವರ್ಷದ ಗಂಡು ಮಗು ಇದ್ದು 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಆದರೆ ಎಚ್‌1 ಎನ್‌1 ಸೋಂಕು ಅವರ ಖುಷಿಯನ್ನೇ ಕಿತ್ತುಕೊಂಡಿದೆ.

 

 

9 ತಿಂಗಳ ಗರ್ಭಿಣಿಯಾಗಿದ್ದ ಛಾಯಾ ಗೆ ಎಚ್‌1 ಎನ್‌1 ಸೋಂಕು ತಗುಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!