March 25, 2026

ಗಣೇಶೋತ್ಸವದ ರಥ ಎಳೆಯುವ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ಇಬ್ಬರು ಸಾವು

0
image_editor_output_image1587124523-1662011613680.jpg

ವಿರುಧು ನಗರ: ತಮಿಳುನಾಡಿನ ವಿರುಧು ನಗರದಲ್ಲಿ ಗಣೇಶೋತ್ಸವದ ರಥ ಎಳೆಯುವ ಸಂದರ್ಭದಲ್ಲಿ ವಿದ್ಯುತ್‌ ತಗುಲಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದುರಂತ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ವಿರುಧು ನಗರ ಜಿಲ್ಲೆಯ ರಾಜಪಾಳ್ಯಂ ಬಳಿಯ ಸೊಕ್ಕನಾಥೂರು ಪುತ್ತೂರು ಪ್ರದೇಶದಲ್ಲಿ ಗಣೇಶೋತ್ಸವದ ರಥಕ್ಕೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ .

ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಐವರ ಪೈಕಿ ಮುನೀಶ್ವರನ್ ಮತ್ತು ವರಿಮುತ್ತು ಎಂಬವರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!