March 25, 2026

ಅಂಬಲಪಾಡಿ: ಚರಂಡಿಗೆ ಬಿದ್ದ ಬೈಕ್, ಯುವಕ ಮೃತ್ಯು

0
image_editor_output_image2094434227-1661924262646.jpg

ಉಡುಪಿ: ದ್ವಿಚಕ್ರ ವಾಹನ ಚರಂಡಿಗೆ ಜಾರಿ ಬಿದ್ದ ಪರಿಣಾಮ 19 ವರ್ಷದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಅಂಬಲ್ಪಾಡಿಯ ಎನ್‌ಎಚ್ 66 ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಲೆನಿನ್ ವಿಲ್ಸನ್ ಎಂದು ಗುರುತಿಸಲಾಗಿದೆ.

ಲೆನಿನ್ ಅವರು ಎನ್‌ಎಚ್ 66 ಸರ್ವಿಸ್ ರಸ್ತೆಯಲ್ಲಿ ಅಂಬಲ್ಪಾಡಿಯಿಂದ ಕಿನ್ನಿಮುಲ್ಕಿ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಅವರನ್ನು ಅಂಬಲಪಾಡಿಯ ಆಸ್ಪತ್ರೆಗೆ ಕರೆದೊಯ್ದು ನಂತರ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!