March 25, 2026

ಮಂಗಳೂರಿನ ದಿವಿತಾ ರೈಗೆ ” ಮಿಸ್‌ ದಿವಾ ಯೂನಿವರ್ಸ್‌ 2022 ಕಿರೀಟ”

0
image_editor_output_image1536840930-1661762095251.jpg

ಮುಂಬಯಿ: ಮಿಸ್‌ ದಿವಾ ಯೂನಿವರ್ಸ್‌ 2022 ಕಿರೀಟವನ್ನು ಈ ಬಾರಿ ಮಂಗಳೂರಿನ ದಿವಿತಾ ರೈ ತನ್ನ ಮುಡಿಗೇರಿಸಿಕೊಂಡಿದ್ದಾರೆ.

2021ರ ಮಿಸ್‌ ಯುನಿವರ್ಸ್ ಹರ್ನಾಜ್‌ ಸಂಧು ಅವರು ಭಾನುವಾರ ಸಂಜೆ ಮುಂಬೈನಲ್ಲಿ ನಡೆದ ಗಣ್ಯರು ಸಿನಿಮಾ ತಾರೆಯರಿಂದ ತುಂಬಿದ್ದ  ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ತೊಡಿಸಿದರು.

ಮಿಸ್ ಯುನಿವರ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದೇ ವೇಳೆ ತೆಲಂಗಾಣ ಮೂಲದ ಪ್ರಜ್ಞಾ ಅಯ್ಯಂಗಾರಿ ಅವರು ಮಿಸ್ ದಿವಾ ಸೂಪರ್‌ನ್ಯಾಷನಲ್ 2022 ಆಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!