August 12, 2026

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸೇವಾ ಚಟುವಟಿಕೆಗೆ ಚಾಲನೆ

0
IMG-20220828-WA0068

ವಿಟ್ಲ: ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿಠಲ ಪದವಿ ಪೂರ್ವ ವಿಟ್ಲ ಇದರ 2022-23ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಜರಗಿತು.
ವಿವೇಕಾನಂದ ಪದವಿ ಕಾಲೇಜು ಪುತ್ತೂರು ಇದರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಪ್ರಕಾಶ್ ರವರು ಉದ್ಘಾಟಿಸಿ ಮಾತನಾಡುತ್ತಾ ಬದುಕಿಗೆ ಮೌಲ್ಯ ಶಿಕ್ಷಣ ನೀಡುವ ಎನ್. ಎಸ್.ಎಸ್. ವ್ಯಕ್ತಿತ್ವ ವಿಕಸನ ಮಾಡುವ ಬಯಲು ವಿಶ್ವವಿದ್ಯಾ ನಿಲಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಠಲ ವಿದ್ಯಾ ಸಂಘ ದ ಸಂಚಾಲಕರಾದ ಎಲ್ ಎನ್ ಕೂಡುರ್ ರವರು ಅಧ್ಯಕ್ಷತೆ ವಹಿಸಿದ್ದರು, ಆಡಳಿತ ಮಂಡಳಿಯ ನಿತ್ಯಾನಂದ ನಾಯಕ್, ಬಾಬು ಕೆ ವಿ, ಪ್ರಾಂಶು ಪಾಲ ರಾದ ಆದರ್ಶ ಚೊಕ್ಕಾಡಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಜಲಜಾಕ್ಷಿ ಉಪಸ್ಥಿತರಿದ್ದರು.
ಎನ್. ಎಸ್ ಎಸ್ ಅಧಿಕಾರಿ ಅಣ್ಣಪ್ಪ ಸಾಸ್ತಾನ ಸ್ವಾಗತಿಸಿದರು. ಕಾಮಿಲ್ ವಂದಿಸಿದರು, ಶಿಲ್ಪಶ್ರೀ ನಿರ್ವಹಿಸಿದರು

Leave a Reply

Your email address will not be published. Required fields are marked *

You may have missed

error: Content is protected !!