ಕ್ಯಾಂಪಸ್ ಫ್ರಂಟ್ ಡೇ ಅಂಗವಾಗಿ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಧ್ವಜಾರೋಹಣ ಕಾರ್ಯಕ್ರಮ
ಬೆಳ್ತಂಗಡಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ತಾಲೂಕಿನ ವಿವಿಧ ಕಡೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಂದೇಶ ಮಾತುಗಳನ್ನಾಡಿದ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಯಾಸೀನ್ ಬಂಗೇರಕಟ್ಟೆ “ಕ್ಯಾಂಪಸ್ ಫ್ರಂಟ್ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಳ್ಳುತ್ತಿದ್ದು ಈ ಶುಭ ಸಂದರ್ಭವೂ ನಮ್ಮ ಸಂಘಟನೆಯ ಪ್ರಭಾವ ಮತ್ತು ಬೆಳವಣಿಗೆಯ ಕುರಿತು ಅರಿತಾಗ ತುಂಬಾ ಸಂತೋಷವಾಗುತ್ತದೆ ಮತ್ತು ಅದರ ಜೊತೆಗೆ ಮುಂದಿನ ಸವಾಲುಗಳನ್ನು ಎದುರಿಸುವ ಕುರಿತು ಹುಮ್ಮಸ್ಸು ತುಂಬುತ್ತೆ.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಖ್ಯಾತೆ ಪಡೆದ ಭಾರತದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂಬ ಆತಂಕಕಾರಿ ಕೂಗುಗಳು, ಧ್ವನಿಗಳು ಮೊಳಗುತ್ತಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಸರಕಾರಗಳು ಸಂವಿಧಾನದ ಪ್ರತಿಜ್ಞೆಯೊಂದಿಗೆ ಅಧಿಕಾರ ವಹಿಸಿಕೊಂಡ ಬಳಿಕ ಅದೇ ಸಂವಿಧಾನವನ್ನು ಬುಡಮೇಲುಗೊಳಿಸುವ ಹುನ್ನಾರದಲ್ಲಿ ತೊಡಗಿರುವಾಗ, ಸಂವಿಧಾನವನ್ನು ಉಳಿಸಿದರೆ ಮಾತ್ರ, ದೇಶ ಉಳಿಯಬಲ್ಲದು ಎಂಬ ಆಲೋಚನೆಯೊಂದಿಗೆ ಸರಕಾರ ಜಾರಿಗೆ ತರುವ ಜನವಿರೋಧಿ ನೀತಿಗಳನ್ನು, ಸಂವಿಧಾನ ವಿರೋಧಿ ಕಾಯ್ದೆಗಳನ್ನು, ವಿದ್ಯಾರ್ಥಿ ವಿರೋಧಿ ತೀರ್ಮಾನಗಳ ವಿರುದ್ಧ ರಾಜಿ ರಹಿತ ಹೋರಾಟದೊಂದಿಗೆ ಕ್ಯಾಂಪಸ್ ಫ್ರಂಟ್ ಮುಂದೆ ಸಾಗುತ್ತಿದೆ.” ಎಂದರು.
ಬೆಳ್ತಂಗಡಿ ತಾಲ್ಲೂಕಿನ ಬಂಗೇರಕಟ್ಟೆ, ಪುಂಜಾಲಕಟ್ಟೆ, ಮದ್ದಡ್ಕ, ಸುನ್ನತ್ಕೆರೆ, ಪಡಂಗಡಿ, ಜಾರಿಗೆಬೈಲ್ ಮತ್ತು ಉಜಿರೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯೆ ಫಾತಿಮಾ, ಜಿಲ್ಲಾ ನಾಯಕರಾದ ತಾಜುದ್ದೀನ್ ಪುಂಜಾಲಕಟ್ಟೆ , ಝಾಹೀದ್ ಸುನ್ನತ್ಕೆರೆ, ಸಹಝಾದ್ ಸುನ್ನತ್ಕೆರೆ, ಸದಫ್ ಬೆಳ್ತಂಗಡಿ , ಸಹಲ್ ಉಜಿರೆ, ಬಾಕಿರ್ ಪುಂಜಾಲಕಟ್ಟೆ, ಅನ್ಸಾಫ್ ಮದ್ದಡ್ಕ, ಕೈಸ್ ಕಣಿಯೂರ್, ಮತ್ತು ಯೂನಿಟ್ ನಾಯಕರು ರವೂಫ್, ಸಹಾದ್, ಸಫ್ವಾನ್, ಉಪಸ್ಥಿತರಿದ್ದರು.