February 2, 2026

ತಮಿಳುನಾಡಿನಲ್ಲಿ ತಡ ರಾತ್ರಿ ರಸ್ತೆ ಅಪಘಾತ: ಬಿ.ಸಿ.ರೋಡ್- ತಲಪಾಡಿ ನಿವಾಸಿ ಮೃತ್ಯು

0
image_editor_output_image-2090905144-1661577164204.jpg

ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಿ.ಸಿ.ರೋಡ್ ತಲಪಾಡಿ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ.

ತಲಪಾಡಿ ನಿವಾಸಿ ಇರ್ಷಾದ್ (37) ಮೃತಪಟ್ಟವರು ಎಂದು ತಿಳಿದುಬಂದಿದೆ.

ಮಂಗಳೂರು ದಕ್ಕೆಯಿಂದ ಚೆನ್ನೈಗೆ ಲಾರಿಯಲ್ಲಿ ಮೀನು ಸಾಗಾಟದ ಮಾಡುತ್ತಿದ್ದ ಇರ್ಷಾದ್ ಚಲಾಯಿಸುತ್ತಿದ್ದ ಲಾರಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇರ್ಷಾದ್ ಅವರ ತಂದೆ ಇತ್ತೀಚಿಗೆ ನಿಧನರಾಗಿದ್ದು, ಮೃತ ಇರ್ಷಾದ್ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!