ಡಾ. ಎಸ್. ಎಂ. ರಷೀದ್ ಹಾಜಿಯವರಿಗೆ ಎಸ್. ಎಂ. ಆರ್. ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನ
ಬಂಟ್ವಾಳ: ರಾಧಾಕೃಷ್ಣ ಶಿಕ್ಷಕರ ಸಂಘದ ಶಿಫಾರಸ್ಸಿನಂತೆ, ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾಗಿರುವ, ಮಂಗಳೂರಿನ ಎಸ್. ಎಂ. ಆರ್. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ರಷೀದ್ ಹಾಜಿಯವರಿಗೆ ಇಲ್ಲಿಗೆ ಸಮೀಪದ ಮಾರ್ನಬೈಲ್ ಎಂಬಲ್ಲಿರುವ ಎಸ್. ಎಂ. ಆರ್.
ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಎಮ್.ಆರ್. ಸ್ಕೂಲ್ ನಲ್ಲಿ ಆಗಸ್ಟ್ 20 ರಂದು ‘ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಕಾರ್ಯಕ್ರಮದಲ್ಲಿ, ಸಮಾರಂಭದ ಅಧ್ಯಕ್ಷತೆ ಸ್ಥಾನ ವಹಿಸಿಕೊಂಡಿದ್ದ ಗ್ರಾಮ ಪಂಚಾಯತ್ ಸಜಿಪ ಮುನ್ನೂರು ಅಧ್ಯಕ್ಷೆಯಾದ ಶ್ರೀಮತಿ ಸಬೀನಾ ಅವರು ಎಸ್.ಎಂ. ರಷೀದ್ ಹಾಜಿಯವರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ,ಸಂದೀಪ್ ಕುಮಾರ್ (ಸದಸ್ಯರು ಗ್ರಾಮ ಪಂಚಾಯತ್ ಸಜಿಪ, ಮುನ್ನೂರು), ಗಣೇಶ್ ಮಾರ್ನಬೈಲ್ (ಸದಸ್ಯರು ಗ್ರಾಮ ಪಂಚಾಯತ್ ಸಜಿಪ ಮುನ್ನೂರು),ಚಂದ್ರಕಲಾ ಶ್ರೀನಿವಾಸ್ ನಾಯ್ಕ್ (ಸದ್ಯಸರು ಗ್ರಾಮ ಪಂಚಾಯತ್ ಸಜಿಪ ಮುನ್ನೂರು), ರವಿಕುಮಾರ್ ಸಮೂಹ ಸಂಪನ್ಮೂಲ ಕೇಂದ್ರ ಸಜಿಪ ಮುನ್ನೂರು, ಅಬ್ದುಲ್ ಲತೀಫ್ ಪ್ರಾಂಶುಪಾಲರು ಮೆಲ್ಕಾರ್ ಮಹಿಳಾ ಕಾಲೇಜ್,
ಪ್ರತಿಮಾ ವೈ.ವಿ. (ಶಿಕ್ಷಣ ಸಂಯೋಜಕರು ಮಂಚಿ ವಲಯ), ಫ್ರಾನ್ಸಿಸ್ ಡೆಸಾ (ಸಹ ಶಿಕ್ಷಕರು ಕಂಚಿನಡ್ಕ ಪದವು, ಸಾಂಸ್ಕೃತಿಕ ಕಾರ್ಯದರ್ಶಿಗಳು ಸರಕಾರಿ ನೌಕರರ ಸಂಘ ಬಂಟ್ವಾಳ), ಭಾಗವಹಿಸಿದ್ದರು. ಅಲ್ಲದೆ, ಫಾತಿಮತುಲ್ ಝಹೀರ, ಮುಖ್ಯೋಪಾಧ್ಯೆಯರು ಎಸ್.ಎಮ್ ಆರ್ ಪಬ್ಲಿಕ್ ಸ್ಕೂಲ್, ಉಪಸ್ಥಿತರಿದ್ದರು.




