ಕೋಳಿಪಾರಂಗೆ ನುಗ್ಗಿದ ಮಳೆ ನೀರು: 9000 ಕೋಳಿಗಳು ಸಾವು
ಗುಡಿಬಂಡೆ : ನ್ಯಾಯಾಲಯ ವ್ಯಾಪ್ತಿಯ ಚೋಳಶೆಟ್ಟಿ ಹಳ್ಳಿಯ ಗ್ರಾಮದ ಲಕ್ಷ್ಮಿನಾರಾಯಣರೆಡ್ಡಿ ಗೆ ಸೇರಿದ ಕೋಳಿಪಾರಂ ಗೆ ನೀರು ನುಗ್ಗಿ ಸುಮಾರು 9000 ಕೋಳಿಗಳು ಸಾವನಪ್ಪಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನ್ಯಾಯಾಲಯ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಗ್ರಾಮದ ರೈತ ಲಕ್ಷ್ಮೀನಾರಾಯಣರೆಡ್ಡಿ ಎಂಬುವವರಿಗೆ ಸೇರಿದ ಮುದ್ದಲಹಳ್ಳಿ ಗ್ರಾಮದ ಸರ್ವೆ ನಂ.1/10 ರ 1 ಎಕರೆ 10 ಗುಂಟೆ ಜಮೀನಿನಲ್ಲಿ 3 ಶೆಡ್ ಗಳನ್ನು ನಿರ್ಮಿಸಲಾಗಿದ್ದು, ಈ ಶೆಡ್ ಗಳಲ್ಲಿ ಸುಮಾರು 12800 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳನ್ನು ಸಾಕುತ್ತಿದ್ದರು.
ಆದರೆ ಶುಕ್ರವಾರ ಮುಂಜಾನೆ ಬಿದ್ದ ಧಾರಾಕಾರ ಮಳೆಗೆ 3 ಶೆಡ್ ಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿ ಸುಮಾರು 9000 ಕ್ಕೂ ಹೆಚ್ಚು ಕೋಳಿ ಮರಿಗಳು ಸಾವನ್ನಪ್ಪಿವೆ, ಇದರಿಂದಾಗಿ ರೈತನಿಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿ ರೈತ ಲಕ್ಷ್ಮಿನಾರಾಯಣರೆಡ್ಡಿ ಬದುಕು ಬೀದಿಪಾಲಾಗಿ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.




