ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಯುವಕ: ಹಲವು ದಿನಗಳ ಕಾರ್ಯಾಚರಣೆ- ಮೃತದೇಹ ಪತ್ತೆ
ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಯುವಕ: ಹಲವು ದಿನಗಳ ಕಾರ್ಯಾಚರಣೆ- ಮೃತದೇಹ ಪತ್ತೆ
ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ನದಿಗಿಳಿದಿದ್ದ ಬಳಿಕ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಯುವಕನ ಶವ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಯುವಕ ಮಂಡ್ಯ ಮೂಲದ ಶಿವು(25) ಎಂಬವರ ಮೃತದೇಹ ಹಲವು ದಿನಗಳ ಹುಡುಕಾಟದ ಬಳಿಕ ಇಂದು ಸುಬ್ರಹ್ಮಣ್ಯದಿಂದ ಒಂದು ಕಿಮೀ ದೂರದ ತಿರ್ಗನ ಗುಂಡಿ ಬಳಿ ಪತ್ತೆಯಾಗಿದೆ.
ಶಿವು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕುಕ್ಕೆಗೆ ಆಗಮಿಸಿದ್ದ. ಸ್ನಾನಕ್ಕೆಂದು ಕುಮಾರಧಾರ ನದಿಗೆ ಹಾರಿದ ಯುವಕ ಕ್ಷಣಾರ್ಧದಲ್ಲೇ ನಾಪತ್ತೆಯಾಗಿದ್ದ.
ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳೂ ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಸುಮಾರು 15 ಜನ ನುರಿತ ಗುಂಡ್ಯದ ಈಜುಗಾರರು, ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆಗೆ ಸಾಥ್ ನೀಡಿದ್ದರು.





