ಕ್ರೈಸ್ತರು ಮತ್ತು ಮುಸ್ಲಿಂ ಸಮುದಾಯದವರಿಂದ ಮತಾಂತರ ಕೃತ್ಯ:
ಹಿಂದುಗಳ ಶಾಂತಿಯನ್ನು ದುರ್ಬಳಕೆ ಮಾಡಿಕೊಂಡರೆ ತಕ್ಕ ಪಾಠ ಕಳಿಸ್ತೇವೆ
ಕಡಬ: ಸೇವೆಯ ಸೋಗಿನಲ್ಲಿ ಹಿಂದೂಗಳನ್ನು ಮತಾಂತರ ನಡೆಸುವುದು ಮುಂದುವರಿದರೆ 2008 ರ ಘಟನೆ ಮರುಕಳಿಸಲಿದೆ ಎಂದು ವಿ.ಹಿಂ.ಪ. ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ.
ಅವರು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿ.ಹಿಂ.ಪ, ಬಜರಂಗದಳದ ವತಿಯಿಂದ ಕಡಬ ಪ್ರಖಂಡ ವಿ.ಹಿಂ.ಪ ಸಹಕಾರದೊಂದಿಗೆ ನಡೆದ ಮತಾಂತರ ವಿರುದ್ದ ಜನಜಾಗೃತಿ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕ್ರೈಸ್ತರು ಮತ್ತು ಮುಸ್ಲಿಂ ಸಮುದಾಯ ಕೆಲವರು ಈ ಮತಾಂತರ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ, ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಸೇವೆಯ ಸೊಗಿನಲ್ಲಿ ನಡೆಯುತ್ತಿರುವ ಮತಾಂತರ ಇದರಿಂದ ಹಿಂದೂ ಸಮಾಜಕ್ಕೆ ಅನ್ಯಾಯವಾಗುತ್ತಿದೆ, ಇದೇ ರೀತಿ ಮತಾಂತರ ಮುಂದುವರಿದರೆ 2008ರಲ್ಲಿ ಸುಮಾರು 58 ಮತಾಂತರ ಕೆಂದ್ರಗಳಿಗೆ ದಾಳಿ ನಡೆಸಲಾಗಿತ್ತು, ಇದೇ ರೀತಿಯ ಘಟನೆ ಮರುಕಳಿಸಬಹುದು, ಈ ರೀತಿ ಮಾಡಲು ನಮಗೆ ಇಷ್ಟ ಇಲ್ಲ ಯಾಕೆಂದರೆ ಹಿಂದೂಗಳು ಶಾಂತಿಯನ್ನು ಬಯಸುತ್ತಾರೆ, ನಮ್ಮ ಶಾಂತಿಯನ್ನು ದುರ್ಬಳಕೆ ಮಾಡಿಕೊಂಡರೆ ಮತ್ತೆ ನಾವು ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾ,ಮೀಜಿ ಯವರು ಆಶೀರ್ವಚನ ನೀಡಿ, ಇಂದು ನಮ್ಮ ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತಿರುವುದು ವಿಷಾಧನಿಯ, ನಾವು ಇದುವರೆಗೆ ಬಡವರನ್ನು ಮಾತ್ರ ಮತಾಂತರ ಮಾಡುತ್ತಾರೆ ಎಂದುಕೊಂಡಿದ್ದೇವೆ ಆದರೆ ಇದೀಗ ಶ್ರೀಮಂತರನ್ನು ಮತಾಂತರ ಮಾಡುವ ಕೆಲಸವೂ ನಡೆಯುತ್ತಿದೆ. ಸರಕಾರ ಕೂಡಲೇ ಮತಾಂತರ ನಿಷೇಧ ಕಾಯ್ದೆಯನ್ನು ತಂದು ಈ ದುಷ್ಕøತ್ಯವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಶ್ರೀ ಕ್ಷೇತ್ರ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಮಾತನಾಡಿ,ಇಂದು ಸಂತರು, ಗೋವುಗಳು,ಮಹಿಳೆಯರು ದೈರ್ಯವಾಗಿ ನಡೆದಾಡಬೇಕಿದ್ದರೆ ಇದಕ್ಕೆ ಸಂಘಟನೆಯ ಶ್ರೀರಕ್ಷೆಯೇ ಕಾರಣವಾಗಿದೆ, ವಿಶಿಷ್ಠ ಪರಂಪರೆಯನ್ನು ಹೊಂದಿರುವ ಹಿಂದೂ ಧರ್ಮವನ್ನು ಉಳಿಸುವ ಪ್ರಯತ್ನದೊಂದಿಗೆ ಗೋ ಹತ್ಯೆ, ಮತಾಂತರ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆಯಾಗುವ ಕಾಯ್ದೆ ಬರಲಿ ಎಂದು ಹಾರೈಸಿದರು.
ವಿ.ಹಿಂ.ಪ ಪ್ರಾಂತ ಉಪಾಧ್ಯಕ್ಷ ಉದ್ಯಮಿ ಪೂವಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಬಜರಂಗದಳ ಸಂಚಾಲಕ ಭರತ್ ಕುಮುಡೇಲು ಉಪಸ್ಥಿತರಿದ್ದರು. ವಿ.ಹಿಂ.ಪ. ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ , ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.