ಬೆಳ್ತಂಗಡಿಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು 40 ವರ್ಷಗಳ ಹಿಂದೆ ಮಿಲಿಟರಿ ಕಾರ್ಖಾನೆಯಲ್ಲಿ ತಯಾರಾಗಿದ್ದು:
ದ.ಕ ಎಸ್ಪಿ ಮಾಹಿತಿ
ಮಂಗಳೂರು: ಬೆಳ್ತಂಗಡಿಯ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಪತ್ತೆಯಾದ 5 ಗ್ರೆನೇಡ್‌ಗಳು ಸುಮಾರು 40 ವರ್ಷಗಳ ಹಿಂದೆ ಮಿಲಿಟರಿ ಕಾರ್ಖಾನೆಯಲ್ಲಿ ತಯಾರಾಗಿದ್ದು ಎಂದು ಎಂದು ದ.ಕ ಜಿಲ್ಲಾ ಎಸ್‌ಪಿ ಋಷಿಕೇಶ್ ಸೋನಾವಣೆ ಭಾನುವಾರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ ಅವರು, ಇವುಗಳನ್ನು 1979-83ರ ಅವಧಿಯಲ್ಲಿ ತಯಾರಿಸಿರುವುದು ಗೊತ್ತಾಗಿದೆ. ಇವು ಹ್ಯಾಂಡ್ ಹೆಲ್ಡ್ ಗ್ರೆನೇಡ್‌ಗಳಾಗಿದ್ದು ಇವುಗಳನ್ನು ಸೈನ್ಯದಲ್ಲಿ ಯುದ್ಧದ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಮಿಲಿಟರಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ತನಿಖೆ ಮುಂದುವರಿಸಲಾಗುವುದು ತಿಳಿಸಿದರು.
ಮಿಲಿಟರಿ ಫ್ಯಾಕ್ಟರಿಯಲ್ಲಿ ತಯಾರಾದ ಈ ಗ್ರೆನೇಡ್‌ಗಳನ್ನು ಸ್ಥಳೀಯವಾಗಿ ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವುದು ಅಸಾಧ್ಯ ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಬಾಂಬ್ ನಿಷ್ಕ್ರೀಯ ದಳದ ಉಪಸ್ಥಿತಿಯಲ್ಲಿ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅವುಗಳು ಈಗಲೂ ಬಳಕೆಗೆ ಯೋಗ್ಯವಾಗಿವೆಯೇ ಇಲ್ಲವೇ ಎಂಬುದನ್ನು ತಿಳಿಸಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.