February 2, 2026

ಮಂಜೇಶ್ವರ: ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಪಂಚಲೋಹ ವಿಗ್ರಹ ಕಳವು ಪ್ರಕರಣ: ಆರೋಪಿಯ ಬಂಧನ

0
image_editor_output_image-71403633-1661267062746

ಕಾಸರಗೋಡು:  ಮಂಜೇಶ್ವರ ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಪಂಚಲೋಹ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಮಜಿಬೈಲ್‌ನ ಲಕ್ಷ್ಮೀಶ (40) ಬಂಧಿತ ಆರೋಪಿ. ದೇವಳದ ಗರ್ಭಗುಡಿಯೊಳಗಿದ್ದ ದೇವರ ಪಂಚಲೋಹ ವಿಗ್ರಹವನ್ನು ಕಳವುಗೈದು, ಕ್ಷೇತ್ರದ ಮುಂಭಾಗ ಹಾಗೂ ತೀರ್ಥ ಮಂಟಪದಲ್ಲಿದ್ದ ಕಾಣಿಕೆ ಹುಂಡಿಗಳಿಂದ ಹಣವನ್ನು ದೋಚಿರುವ ವಿಚಾರ ಆಗಸ್ಟ್ 20ರಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. ಆರೋಪಿಯು ಹುಂಡಿಗಳಿಂದ ಹಣ ದೋಚಿ ಹುಂಡಿಗಳನ್ನು ಕ್ಷೇತ್ರದ ಸಮೀಪ ಎಸೆದು ಪರಾರಿಯಾಗಿದ್ದ. ಕಳವುಗೈಯ್ಯಲಾದ ವಿಗ್ರಹ ಪೊದೆಗಳೆಡೆಯಲ್ಲಿ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!