February 2, 2026

ಕುಕ್ಕೆ: ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಬೆಂಗಳೂರಿನ ಯುವಕ ನಾಪತ್ತೆ

0
IMG-20220821-WA0112

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ  ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಬೆಂಗಳೂರಿನ ಯುವಕನೋರ್ವ ಕಣ್ಮರೆಯಾಗಿರುವ ಘಟನೆ ಇಂದು ಸಂಭವಿಸಿದೆ.
  ಮಂಡ್ಯ ಮೂಲದ  ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿವು (25) ನೀರಲ್ಲಿ ಕಣ್ಮರೆಯಾಗಿರುವ ಯುವಕ ಎಂದು ಆತನ ಜೊತೆಗಾರರು ತಿಳಿಸಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
   ಶಿವು ಬೆಂಗಳೂರಿನ ಸ್ನೇಹಿತರೊಂದಿಗೆ ಕುಕ್ಕೆಗೆ ಆಗಮಿಸಿದ್ದು ಈ ವೇಳೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ್ದು ಕೆಲ ಹೊತ್ತಿನಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಯುವಕನಿಗೆ ಈಜು ಬರುತ್ತದೆ ಎಂದು ಜೊತೆಗಾರರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದವರು ಆಗಮಿಸಿ ಪತ್ತೆ ಕಾರ್ಯಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!