February 3, 2026

ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕಳವು: ಬಿಎಸ್ಸಿ ಪದವೀಧರನ ಬಂಧನ

0
image_editor_output_image461751473-1661059690895.jpg

ಬೆಂಗಳೂರು: ಆಭರಣ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ಭೇಟಿ ನೀಡಿ ಚಿನ್ನಾಭರಣ ಕದ್ದೊಯ್ಯುತ್ತಿದ್ದ ಆರೋ‍ಪಿ ರಾಹುಲ್ ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ದೆಹಲಿ ನಿವಾಸಿ ರಾಹುಲ್, ಬಿ.ಎಸ್ಸಿ ಪದವೀಧರ. ವಿಮಾನದ ಮೂಲಕ ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ವಾಪಸು ಹೋಗುತ್ತಿದ್ದ. ಈತನನ್ನು ಬಂಧಿಸಿ 120 ಗ್ರಾಂ ಚಿನ್ನಾಭರಣ ಹಾಗೂ ₹ 7 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ರಾಹುಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಹೋಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಕಳ್ಳತನಕ್ಕೆ ಇಳಿದಿದ್ದ.’

‘ನಗರಕ್ಕೆ ಬರುತ್ತಿದ್ದ ಆರೋಪಿ, ಒಬ್ಬ ಅಥವಾ ಇಬ್ಬರು ಸಿಬ್ಬಂದಿ ಇರುವ ಮಳಿಗೆಗಳನ್ನು ಗುರುತಿಸುತ್ತಿದ್ದ. ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಭೇಟಿ ನೀಡಿ, ಚಿನ್ನಾಭರಣ ತೋರಿಸುವಂತೆ ಹೇಳುತ್ತಿದ್ದ. ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದೆ’ ಎಂದು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!