ಟ್ಯಾಲೆಂಟ್ ಮದ್ರಸ ಎಕ್ಸೆಲೆನ್ಸಿ ಅವಾರ್ಡ್ -2022: ಮಅನುಲ್ ಉಲೂಂ ಮರಕ್ಕಿಣಿ ಮದ್ರಸದ ವಿದ್ಯಾರ್ಥಿ ಮಹಮ್ಮದ್ ರಿಶಾನ್ ಆಯ್ಕೆ
ವಿಟ್ಲ: ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ವರ್ಷಂಪ್ರತಿ ನೀಡಲ್ಪಡುವ ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸಿ ಈ ವರ್ಷದ ಅವಾರ್ಡಿಗೆ ಮಅನುಲ್ ಉಲೂಂ ಮದ್ರಸ ಮರಕ್ಕಿಣಿಯ ಐದನೇ ತರಗತಿಯ ಮಹಮ್ಮದ್ ರಿಶಾನ್* ಎಂಬ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದಲ್ಲಿ 5,7,10,+2 ತರಗತಿಯಲ್ಲಿ ಉನ್ನತ ಸಾಧನೆಗೈದ ಪ್ರತಿಯೊಂದು ತರಗತಿಯ 5ಮಂದಿ ವಿದ್ಯಾರ್ಥಿಗಳಿಗೆ ಈ ಅವಾರ್ಡ್ ನೀಡುತ್ತಿದ್ದು . ನಾಳೆ ಮಂಗಳೂರಿನ ಟ್ಯಾಲೆಂಟ್ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಈತ ಎಂಜಿನಿಯರ್ ಮೊಹಮ್ಮದ್ ರಫೀಕ್ ಮರಕ್ಕಿನಿ ಅಮ್ಸೀನಾ ಮರಕ್ಕಿನಿ ದಂಪತಿಗಳ ಪುತ್ರನಾಗಿದ್ದಾನೆ.



