March 25, 2026

ಬುಡೋಳಿ: ಕಾರು ಮತ್ತು ಆಕ್ಟೀವಾ ವಾಹನದ ನಡುವೆ ಅಪಘಾತ: ಸವಾರ ಗಂಭೀರ

0
image_editor_output_image513488922-1661003213401

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಆಕ್ಟೀವಾ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ  ಆಕ್ಟೀವ ಸವಾರ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಗಡಿಯಾರ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಆಕ್ಟೀವಾ  ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಮುಡಿಪು ನಿವಾಸಿ ಅಬೂಬಕ್ಕರ್ ಅವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಮಾಣಿಯ ಸೋಶಿಯಲ್ ಇಕ್ವಾ ಫೇಡರೇಶನ್ ಆಂಬ್ಯುಲೆನ್ಸ್ ಮೂಲಕ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!