February 4, 2026

ಶಿರಾ: ಲಾರಿಗೆ ಕಾರು ಢಿಕ್ಕಿ, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತ್ಯು

0
image_editor_output_image-797705817-1660969302648.jpg

ತುಮಕೂರು: ಶಿರಾ ತಾಲ್ಲೂಕಿನ ತರೂರು ಗೇಟ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಶಿರಾ ತಾಲ್ಲೂಕಿ‌ನ ಕಡವಿಗೆರೆ ನಿವಾಸಿಗಳಾದ ಅವಿನಾಶ್ (28) ಮತ್ತು ಅವರ ಮಗಳು ಪ್ರಣಂತಿ (5), ಅವಿನಾಶ್ ಸಂಬಂಧಿಕರ ಮಗಳು ಸೌಖ್ಯ ( 4) ಮೃತಪಟ್ಟ ದುರ್ದೈವಿಗಳು.

ಅವಿನಾಶ್ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಿರಾದಿಂದ ನೆಲಹಾಳ್‌ಗೆ ತೆರಳುವಾಗ ಅಪಘಾತ ಸಂಭವಿಸಿದೆ. ಅವಿನಾಶ್ ಮತ್ತು ಪ್ರಣಂತಿ ಸ್ಥಳದಲ್ಲಿಯೇ ಮೃತಪಟ್ಟರೆ, ಸೌಖ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!