March 25, 2026

“ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ”: ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿವಾದಾತ್ಮಕ ಹೇಳಿಕೆ

0
image_editor_output_image1928060941-1660917052557.jpg

ಬೆಂಗಳೂರು : ”ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ, ನಾವು ಕಾಂಗ್ರೆಸ್ ಪಕ್ಷದವರು, ಗಾಂಧೀಜಿ ತತ್ವ ಅನುಸರಿಸುತ್ತಿರುವವರು” ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಫೇಸ್ ಬುಕ್ ಲೈವ್ ನಲ್ಲಿ ಸಿದ್ದರಾಮಯ್ಯ ಅವರತ್ತ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು  ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಲಪಾಡ್, ಬಿಜೆಪಿಯವರು ಊರುಬಿಟ್ಟು ಓಡಿಹೋಗುವಂತೆ ಮಾಡುತ್ತೇವೆ. ರಾಜ್ಯದ ಎಲ್ಲೆಡೆ ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಸಚಿವರಿಗೂ ಮೊಟ್ಟೆ ಕಳುಹಿಸಿ ಕೊಡುತ್ತೇವೆ. ನಾವು ಗಾಂಧೀಜಿ ಅವರ ಅಹಿಂಸಾ ತತ್ವದಿಂದ ಸೋಲಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!