March 25, 2026

ಕಾಸರಗೋಡು: ಅಣೆಕಟ್ಟಿನಲ್ಲಿ ನೀರು ಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

0
n413821718166065971343657074da2966c517acae70890c12ed3872c92e297c10aa4a8a38381cca9eef8cd.jpg

ಕಾಸರಗೋಡು: ಮಣಿಯಂಪಾರೆ ಅಣೆಕಟ್ಟಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರು ಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.

ಚಲ್ಲಂಗಯ ಸಿ.ಜೆ. ಮೂಲೆಯ ಅಬ್ದುಲ್ಲ ಅವರ ಪುತ್ರ ಜಸ್ವಾ ದ್ (17) ಮೃತ ವಿದ್ಯಾರ್ಥಿ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದೆ.

ಸೋಮವಾರ ಸ್ನೇಹಿತರ ಜೊತೆ ಜಸ್ವಾದ್ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬಂ, ಬದಿಯಡ್ಕ ಠಾಣಾ ಪೊಲೀಸರು ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಸಂಜೆ ಮತ್ತೆ ಶೋಧ ನಡೆಸಿದಾಗ ಮೃತದೇಹ ಹೊಳೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈತ ಮುಹಿಮ್ಮಾತ್ ಹಯರ್ ಪ್ಲಸ್ ಟು ವಿದ್ಯಾರ್ಥಿಯಾಗಿದ್ದ.

Leave a Reply

Your email address will not be published. Required fields are marked *

error: Content is protected !!