March 25, 2026

ಮಾಣಿ: ಪಾಪ್ಯುಲರ್ ಫ್ರಂಟ್ ವತಿಯಿಂದ 75ನೇ ಸ್ವಾತಂತ್ರೋತ್ಸವ ಆಚರಣೆ

0
IMG-20220815-WA0002.jpg

ಮಾಣಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಮಾಣಿ ವಲಯ ಸಮಿತಿ ವತಿಯಿಂದ ಸೂರಿಕುಮೇರ್ ಜಂಕ್ಷನ್ನಿನಲ್ಲಿ ದ್ವಜಾರೋಹಣ ನಡೆಸಲಾಯಿತು.

ಸೂರಿಕುಮೇರ್ ಜುಮ್ಮಾ ಮಸೀದಿಯ ಖತೀಬರಾದ ಆಶಿಫ್ ಹನೀಫೀ ದುವಾಶಿರ್ವಚನಗೈದರು, ಸದರ್ ಆಬ್ದುಲ್ ಸಲಾಂ ಹನೀಫೀ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯ ಕಾರ್ಯದರ್ಶಿ ಸಿದ್ದೀಖ್ ಕೊಡಾಜೆ ದ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಮನ್ಸೂರ್ ಕಲ್ಲಡ್ಕ ರವರು ದೇಶದ ಸೌಹಾರ್ಧತೆ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಕೋಮುವಾದಿ ಶಕ್ತಿಗಳಿಂದ ದೇಶವನ್ನು ಉಳಿಸಲು ಪ್ರತೀಯೊಬ್ಬ ಭಾರತೀಯನೂ ಕಟಿಬದ್ದರಾಗಿರಬೇಕಾದ ಅಗತ್ಯವಿದೆ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಸೂರಿಕುಮೇರ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಮೂಸಾ ಕರೀಂ, ತಾಲೂಕು ಸಮಿತಿ ಸದಸ್ಯರಾದ ಲತೀಫ್ ಕೊಡಾಜೆ, ಸ್ಥಳೀಯರಾದ ಹಸನಾಕಾ, ವಲಯ ಸಮಿತಿ ಸದಸ್ಯರುಗಳಾದ ಶಾಫಿ ಸೂರಿಕುಮೇರ್, ಇರ್ಫಾನ್ ಬುಡೋಳಿ, ನಿಸಾರ್ ಗಡಿಯಾರ, ಇಸ್ಮಾಯಿಲ್ ಬುಡೋಳಿ, ನಾಸಿರ್ ಕೊಡಾಜೆ, ಮುಜೀಬ್ ಸೂರಿಕುಮೇರ್ ಮೊದಲಾದವರು ಉಪಸ್ಥಿತರಿದ್ದರು.
ಸಮಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!