ವಿಟ್ಲ ಹಲವೆಡೆ ಸ್ವಾತಂತ್ರ್ಯೋತ್ಸವ ಆಚರಣೆ
ವಿಟ್ಲ: 75ನೇ ಸ್ವಾತಂತ್ರ್ಯೋತ್ಸವವನ್ನು ವಿಟ್ಲ ಸುತ್ತಮುತ್ತಲಿನಲ್ಲಿ ಸಂಭ್ರಮದಲ್ಲಿ ಆಚರಿಸಲಾಯಿತು.
ಕುದ್ದುಪದವು:
ಕುದ್ದುಪದವು ವಾಲ್ಮೀಕಿ ಆಶ್ರಮ ಶಾಲೆಯ ವತಿಯಿಂದ ಆಯೋಜಿಸಿದ ೭೫ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ಧ್ವಜಾರೋಹಣ ನೆರವೇರಿಸಿದರು.
ವಾಲ್ಮೀಕಿ ಆಶ್ರಮ ಶಾಲೆಯ ಮೇಲ್ವಿಚಾರಕರಾದ ಭವ್ಯ ಪಿ., ಶಿಕ್ಷಕಿ ತುಳಸಿ, ಶಿಕ್ಷಕಿ ಗೀತಾ ಕುಮಾರಿ ಇದ್ದರು.
ವಿಟ್ಲ ಮಾದರಿ ಶಾಲೆ: ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿನಿವೃತ್ತ ಸೈನಿಕ ದಿವಾಕರ್ ಅವರು ಧ್ವಜಾರೋಹಣಗೈದರು.
ಸುಬ್ರಾಯ ಪೈ, ರಮಾನಾಥ ವಿಟ್ಲ, ರವೀಶ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ವಿಠಲ ಪ್ರೌಢ ಶಾಲೆ:
ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಧ್ವಜಾರೋಹಣವನ್ನು ನಿವೃತ್ತ ಸೈನಿಕ ಕ್ಯಾಪ್ಟನ್ ದಾಸಪ್ಪ ಪೂಜಾರಿ ನೆರವೇರಿಸಿದರು. ಬಾಬು ಕೆ ವಿ, ರವೀಶ್ ವಿಟ್ಲ, ಮಹಮ್ಮದ್ ಸಫ್ವಾನ್, ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ ಕಿರಣ್ ಕುಮಾರ್ ಮೊದಲಾದವು ಉಪಸ್ಥಿತರಿದ್ದರು.

ವಿಠಲ ಪಿಯು ಕಾಲೇಜ್ : ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ಸೈನಿಕ ಬಾಲಕೃಷ್ಣ ಗೌಡ ಅವರು ಧ್ವಜಾರೋಹಣಗೈದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪನ್ಯಾಸಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವಿಟ್ಲ ಸಮದಾಯ ಆಸ್ಪತ್ರೆ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ವೇದಾವತಿ ಬಲ್ಲಾಳ್ ಅವರು ಧ್ವಜಾರೋಹಣಗೈದರು. ಆಸ್ಪತ್ರೆ ಸಿಬ್ಬಂಧಿಯವರು ಉಪಸ್ಥಿತರಿದ್ದರು.

ಅನಿಲಕಟ್ಟೆ ಶಾಲೆ
ವಿಟ್ಲ ; ಅನಿಲಕಟ್ಟೆ ಸರಕಾರಿ ಶಾಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಧ್ವಜಾರೋಹಣ ಮಾಡಿದರು. ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ನವೀನ್ ಖಂಡಿಗ,
ತಾಲೂಕು ಪಂ.ಮಾಜಿ ಸದಸ್ಯೆ ಧರ್ಮಾವತಿ ಪಿ.ಬಿ, ರಾಮಣ್ಣ ಗೌಡ ದೇವರಮನೆ, ವಿಟ್ಲ ಪಡ್ನೂರು ಪಂ.ಸದಸ್ಯೆ ಜಯಲಕ್ಷ್ಮಿ,ಸದಸ್ಯ ಜಯಂತ್ ಪಿ. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ಸಿ.ಎಚ್, ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ,,ಶಿವಪ್ಪ ನಾಯ್ಕ,ಜಯಂತ ಪಿ.
ಈ ಸಂದರ್ಭದಲ್ಲಿ ಶೋಭಾ ಪಿ.ಕೆ.ರೇವತಿ ಸೊರಂಗದ ಮೂಲೆ ಯವರನ್ನು ಸನ್ಮಾನಿಸಲಾಯಿತು.
ಯುಮುನ,ಪಾರ್ವತಿ ಆನಂದ ,ಹೇಮಾವತಿ,ದಿವ್ಯಾ,ಶುಭ ಲಕ್ಷ್ಮಿ, ಗುಲಾಬಿ ಮುಂತದವರು ಉಪಸ್ಥಿತರಿದ್ದರು.
ವಿಟ್ಲ ಹೊರೈಝನ್ ಸ್ಕೂಲ್ : ವಿಟ್ಲ:ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಹಾಗೂ ಮಸೀದಿಯ ಅಧ್ಯಕ್ಷ ಇಕ್ಬಾಲ್ ಶೀತಲ್ ಅವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ನೂತನ ಧ್ವಜಸ್ತಂಭವನ್ನು ಉದ್ಘಾಟಿಸಲಾಯಿತು.
ಖತೀಬ್ ನಸೀಹ್ ದಾರಿಮಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಪೇಟೆಯಲ್ಲಿ ವೈಭವದ ಮೆರವಣಿಗೆ ನಡೆಯಿತು.
ವೇದಿಕೆಯಲ್ಲಿ ಶಾಲೆಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಸಂಚಾಲಕ ನೋಟರಿ ಅಬೂಬಕರ್ ,ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ,ಟ್ರಸ್ಟಿಗಳಾದ ವಿ .ಕೆ.ಎಂ ಅಶ್ರಫ್,ಸಿದ್ದೀಕ್ ಮಾಲಮೂಲೆ,ಇಕ್ಬಾಲ್ ಹಳೆಮನೆ,ಅಬ್ದುಲ್ ರಹಿಮಾನ್ ದೀಪಕ್,ಅಬೂಬಕರ್ ಅನಿಲಕಟ್ಟೆ, ಸದರ್ ಉಮರ್ ಸಅದಿ,ಮುಖ್ಯ ಶಿಕ್ಷಕ ಮನಾಝೀರ್ ಮುಡಿಪು ,ಮಸೀದಿಯ ಕಾರ್ಯದರ್ಶಿ ಹನೀಫ್ ಬದ್ರಿಯಾ,ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ,ಕೋಶಾಧಿಕಾರಿ ಶೆರೀಫ್ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಗಾಯತ್ರಿ ಸ್ವಾಗತಿಸಿ, ಚೇತನಾ ಧನ್ಯವಾದಗೈದರು. ಸೀತಾ ಲಕ್ಷ್ಮಿ ಮತ್ತು ಅಮಿತಾ ಕಾರ್ಯಕ್ರಮ ನಿರೂಪಿಸಿದರು.

ಜೇಸಿ ಸ್ಕೂಲ್: ಆಜಾದಿ ಕಾ ಅಮೃತ್ ಮಹೋತ್ಸವ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಜೀಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯಿತು.
ನಿವೃತ್ತ ಯೋಧರು ವಿದ್ಯಾರ್ಥಿಗಳ ಪೋಷಕರು ಆದ ಶ್ರೀ ಕರುಣಾಕರ,ಶ್ರೀ ದಯಾನಂದ,ಶ್ರೀ ರಮೇಶ,ಶ್ರೀ ಪುರಂದರ ಹಾಗೂ ಶ್ರೀ ನಾಗರಾಜ ಇವರನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ 9:30ಕ್ಕೆ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಶ್ರೀಧರ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಜೊತೆ ಕಾರ್ಯದರ್ಶಿಯಾದ ಶ್ರೀ ಪ್ರಕಾಶ್ ಕುಕ್ಕಿಲ ರವರು ಪ್ರಪಂಚದಲ್ಲಿ ಶ್ರೇಷ್ಠ ಸ್ಥಾನ ಪಡೆದುಕೊಂಡ ದೇಶದ ಶ್ರೇಷ್ಠತೆಯನ್ನು ಕೊಂಡಾಡಿದರು ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಶ್ರೀ ಹಸನ್ ವಿಟ್ಲ ಮೋಹನ್ ಎ, ಮೋನಪ್ಪ ಶೆಟ್ಟಿ, ಆಡಳಿತ ಅಧಿಕಾರಿ ಶ್ರೀ ರಾಧಾಕೃಷ್ಣ ಎ,ಪ್ರಾಂಶುಪಾಲರಾದ ಶ್ರೀ ಜಯರಾಮ್ ರೈ ಹಾಗೂ ಉಪಪ್ರಾಂಶುಪಾಲೆಯರಾದ ಶ್ರೀಮತಿ ಜ್ಯೋತಿ ಶೆಣೈ ಹಾಗೂ ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು.



ಶ್ರೀ ಕರುಣಾಕರ ರವರು ತಮ್ಮ ಕರ್ತವ್ಯದ ಅನುಭವವನ್ನು ಹಂಚಿಕೊಂಡರು. ಶಾಲಾ ನಾಯಕನಾದ ಶ್ರೀ ತೇಜಸ್ವಿ ತೆಂಕಬೈಲು ಈ ದಿನದ ಪ್ರಾಮುಖ್ಯತೆಯ ಕುರಿತು ಮಾತನಾಡಿದರು.
ಎಲ್ ಕೆ ಜಿ ಇಂದ ಹಿಡಿದು 10ನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳು ದೇಶಭಕ್ತಿ ಮೂಡಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕೊನೆಗೆ ಸಿಹಿ ತಿಂಡಿ ವಿತರಿಸಲಾಯಿತು




