October 13, 2026

ಬಂಟ್ವಾಳ: ಗಣರಾಜ್ಯ ರಕ್ಷಿಸಿ ಅಭಿಯಾನದ ಅಂಗವಾಗಿ ಕ್ರೀಡಾಕೂಟ

0
IMG-20220814-WA0006.jpg

ಬಂಟ್ವಾಳ: ಗಣರಾಜ್ಯ ರಕ್ಷಿಸಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ ‘ಚಿರಿಕಲಿಲ್ ಒರು ನಾಲ್’ ಎಂಬ ಶ್ರೀರ್ಷಿಕೆಯಡಿ ಕ್ರೀಡಾಕೂಟವು ಗಡಿಯಾರ ಮೈದಾನದಲ್ಲಿ ಇಂದು ನಡೆಯಿತು.

ಇದರ ಪ್ರಯುಕ್ತ ‘ಡಿಸ್ಕ್ ತ್ರೋ, ಶಾಟ್ ಪುಟ್, ಹಗ್ಗಜಗ್ಗಾಟ, ರಿಲೆ, ತ್ರೋ ಬಾಲ್ ಮೊದಲಾದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಕರು, ಮಕ್ಕಳ ಸಹಿತ ಗ್ರಾಮಸ್ಥರು ಉತ್ಸಾಹದಿಂದ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕ್ರೀಡಾಕೋಟದಲ್ಲಿ ರಫೀಖ್ ಅಸ್ನಾ ನೇತೃತ್ವದ ತಂಡ ಪ್ರಥಮ ಹಾಗೂ ಶಾಫಿ ಸೂರಿಕುಮೇರ್ ನೇತೃತ್ವದ ತಂಡ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಬಳಿಕ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದೀಕ್ ಕೊಡಾಜೆ ವಹಿಸಿದ್ದರು, ಸಮಾದ್ ಸಮಾರೋಪ ಭಾಷಣಗೈದರು, ಕ್ರೀಡಾಕೋಟದ ತೀರ್ಪುಗಾರರಾಗಿ ನಿಸಾರ್ ಗಡಿಯಾರ ಹಾಗೂ ಇಮ್ರಾನ್ ಬುಡೋಳಿ ನಡೆಸಿಕೊಟ್ಟರು. ಈ ಸಂಧರ್ಭ ಇರ್ಫಾನ್ ಮುರಬೈಲ್, ನಾಸಿರ್ ಕೊಡಾಜೆ, ಲತೀಫ್ ಕೊಡಾಜೆ, ಇರ್ಫಾನ್ ಬುಡೋಳಿ ಮೊದಲಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

You may have missed

error: Content is protected !!