October 13, 2026

ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿಯ ಚಾಟಿಂಗ್: ಸಂಚಾರ ತಡೆದು, ಯುವಕ-ಯುವತಿ ವಶಕ್ಕೆ ಪಡೆದ ಅಧಿಕಾರಿಗಳು

0
image_editor_output_image-26496409-1660479920450

ಮಂಗಳೂರು;ಮಂಗಳೂರು ಏರ್ ಪೋರ್ಟ್ ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಯುವಕ-ಯುವತಿ ಚಾಟಿಂಗ್ ಭಾರೀ ಆತಂಕ ಸೃಷ್ಟಿಸಿ ರನ್ ವೇನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನವನ್ನೇ ಸಂಚಾರ ತಡೆದು ತಪಾಸಣೆ ನಡೆಸಿದ ಘಟನೆ ನಡೆದಿದೆ.

ಚಾಟ್ ಗೆ ಸಂಬಂಧಿಸಿ ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ.

 

ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಯುವತಿಯೊಬ್ಬಳು ಬಂದಿದ್ದು, ಮಂಗಳೂರು ಏರ್ ಪೋರ್ಟ್ ಗೆ ಮುಂಬೈಗೆ ತೆರಳಲು ಮತ್ತೊಬ್ಬ ಯುವಕ ಬಂದಿದ್ದ. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ನಡೆಸಿದ್ದರು.ಯುವಕ ಮುಂಬೈ ವಿಮಾನದಲ್ಲಿ ಕೂತಿದ್ದು, ರನ್ ವೇಯಲ್ಲಿ ಟೇಕಾಫ್ ಗೆ ವಿಮಾನ ಸಿದ್ದವಾಗಿತ್ತು.ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಯುವಕ ಚಾಟಿಂಗ್ ನಲ್ಲಿ ನಿರತವಾಗಿದ್ದ. ಚಾಟಿಂಗ್ ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯುವತಿಯ ಚಾಟಿಂಗ್ ಗಮನಿಸಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.‌

ಮಾಹಿತಿ ಪಡೆದು ಮುಂಬೈ ವಿಮಾನ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿದೆ.ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!