ವಿದ್ಯಾರ್ಥಿಗಳ ನಡುವೆ ನಡೆದ ಜಗಳ: ಓರ್ವ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರು: ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಶಾಂಪುರ ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಎಚ್‌ಬಿಆರ್ ಲೇಔಟ್ ಸಮೀಪ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಅರ್ಬಾಜ್ (18) ಕೊಲೆಯಾದ ವಿದ್ಯಾರ್ಥಿ. ಈ ಘಟನೆಯಲ್ಲಿ ಮತ್ತೂಬ್ಬ ಪಿಯುಸಿ ವಿದ್ಯಾರ್ಥಿ ಫರಾಜ್ ಸಹ ಗಾಯಗೊಂಡಿದ್ದಾನೆ.
ಕೃತ್ಯ ಎಸಗಿ ಪರಾರಿಯಾಗಿರುವ ಬಿ.ಕಾಂ ವಿದ್ಯಾರ್ಥಿ ಮೊಹಮ್ಮದ್ ಸಾದ್ ಹಾಗೂ ಆತನ ಸ್ನೇಹಿತರ ಪತ್ತೆಗಾಗಿ ಶೋಧ ನಡೆಸಲಾಗಿದೆ.




