November 13, 2024

ವ್ಯಾಪಾರ ಮಾತುಕತೆಗಾಗಿ ಕರೆದು ಮಹಿಳೆಯ ಮೇಲೆ ಅಚ್ಯಾಚಾರ

0

ಬೆಂಗಳೂರು: ನಗರದ 34 ವರ್ಷದ ಉದ್ಯಮಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೆನ್ನೈ ಮೂಲದ 52 ವರ್ಷದ ವ್ಯಕ್ತಿಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಸಿಬಿಡಿಯಲ್ಲಿರುವ ಸ್ಟಾರ್ ಹೋಟೆಲ್‌ಗೆ ವ್ಯಾಪಾರ ಮಾತುಕತೆಗಾಗಿ ಆಕೆಯನ್ನು ಕರೆದ ನಂತರ ಶಂಕಿತ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ ಅಚ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆಗಸ್ಟ್ 6 ರಂದು ಈ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. 

ಆರೋಪಿಯನ್ನು ತಮಿಳುನಾಡು ಮೂಲದ ರಮೇಶ್ ಎಂದು ಗುರುತಿಸಲಾಗಿದ್ದು, ಆತನ ಹುಡುಕಾಟಕ್ಕೆ ಪೊಲೀಸ್ ತಂಡ ಚೆನ್ನೈಗೆ ತೆರಳಿದೆ. ಅತ್ಯಾಚಾರದ ಬಳಿಕ ಈ ಬಗ್ಗೆ ಯಾರಿಗೂ ಹೇಳದಂತೆ ಆತ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!