ಸಿನಿಮಾ ನೋಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ
ಮಧುಗಿರಿ : ಅರುಂಧತಿ ಸಿನಿಮಾವನ್ನು ಹತ್ತಾರು ಬಾರಿ ನೋಡಿದ್ದ ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನರಳಾಡುತ್ತಿದ್ದು ಕರವೇ ತಾಲೂಕು ಅಧ್ಯಕ್ಷ ಶಿವಕುಮಾರ್ ನೆರವಿನಿಂದ ಆಸ್ಪತ್ರೆ ಸೇರಿ ಬದುಕುಳಿದಿದ್ದಾನೆ.
ತಾಲೂಕಿನ ಗಿಡೈಯ್ಯನಪಾಳ್ಯದ ಸಿದ್ದಪ್ಪ ನವರ ಪುತ್ರ ರೇಣುಕಾ ಪ್ರಸಾದ್ (22) ಎಂಬ ಯುವಕನೇ ಈ ಕೆಲಸ ಮಾಡಿಕೊಂಡಿರುವುದು.
20 ಲೀ. ಪೆಟ್ರೋಲ್ ತಂದಿದ್ದ ಈತ ಅದನ್ನು ರೇಷ್ಮೆ ಶೆಡ್ ನಲ್ಲಿರಿಸಿ 1 ಲೀ. ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಬಳಿಕ ಬೆಂಕಿಯ ಉರಿ ತಾಳಲಾರದೆ ರಸ್ತೆಗೆ ಓಡಿ ಬಂದು ಕಿರುಚಾರಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ತಾಲೂಕು ಕರವೇ ಅಧ್ಯಕ್ಷ ಶಿವಕುಮಾರ್ ಹಾಗೂ ಸ್ನೇಹಿತರು ತಕ್ಷಣ ತುರ್ತುವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.




