10 ವರ್ಷದ ಮಗಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ
ಬೆಂಗಳೂರು: ಬನಶಂಕರಿಯಲ್ಲಿ ದಂತ ವೈದ್ಯೆಯೊಬ್ಬರು ತನ್ನ 10 ವರ್ಷದ ಮಗಳನ್ನು ನೇಣುಬಿಗಿದು ಕೊಂದು ಬಳಿಕ ತಾನೂ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬನಶಂಕರಿ 2ನೇ ಹಂತದಲ್ಲಿ ವಾಸವಾಗಿದ್ದ ಶೈಮಾ(36) ತನ್ನ ಮಗಳು ಆರಾಧನಾ(10)ಳನ್ನು ಕೊಂದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ.
ಕೊಡಗಿನ ವಿರಾಜಪೇಟೆ ಮೂಲದ ಶೈಮಾ 12 ವರ್ಷಗಳ ಹಿಂದೆ ಕೋಲಾರ ಮೂಲದ ನಾರಾಯಣ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ದಂತ ವೈದ್ಯರಾಗಿದ್ದು, ಬನಶಂಕರಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ.
ದಂಪತಿಗೆ ಆರಾಧನಾ ಎಂಬ ಮಗಳಿದ್ದು, ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು. ಎರಡು ದಿನಗಳ ಹಿಂದೆ ನಾರಾಯಣ ಎಂದಿನಂತೆ ಬೆಳಗ್ಗೆ 9 ಗಂಟೆ ಕ್ಲಿನಿಕ್ ಗೆ ಹೋಗಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾರಾಯಣ್, ಮನೆಗೆ ಫೋನ್ ಮಾಡಿದ್ದಾರೆ. ಪತ್ನಿ ಶೈಮಾ ಕರೆ ಸ್ವೀಕರಿಸಿಲ್ಲ.
ನಂತರ ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ತೆರೆದಿಲ್ಲ. ಹೀಗಾಗಿ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಆರಾಧನಾಳನ್ನು ಕೊಂದು ಫ್ಯಾನ್ ಗೆ ನೇಣು ಬಿಗಿದು, ಬಳಿಕ ಅದೇ ಫ್ಯಾನ್‌ಗೆ ಶೈಮಾ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.




