February 2, 2026

ಕಾರಿನಲ್ಲಿ ಭಾರೀ ಮೌಲ್ಯದ ಬ್ರೌನ್ ಶುಗರ್ ಸಾಗಾಟ: ಕಾಸರಗೋಡಿನಲ್ಲಿ ಮೂವರ ಬಂಧನ

0
image_editor_output_image-669660117-1660036387784.jpg

ಕಾಸರಗೋಡು: ಕಾಸರಗೋಡಿನಿಂದ ಮಲಪ್ಪುರಂಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಬ್ರೌನ್ ಶುಗರ್ ಸಹಿತ ಮೂವರನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತರನ್ನು ಮಲಪ್ಪುರಂ ಕೊಂಡೊ ಟ್ಟಿಯ ಮುಹಮ್ಮದ್ ಅಜ್ಮಲ್ (26), ಅರಿಕ್ಕೋಡ್‌‌ನ ಎನ್. ಅನ್ಸಿಲ್ (22) ಮತ್ತು ಮುಹಮ್ಮದ್ ಫೈಝಾಸ್ (22) ಎಂದು ಗುರುತಿಸಲಾಗಿದೆ.

ಕಾರಿನಿಂದ 30 ಗ್ರಾಂ ಬ್ರೌನ್ ಶುಗರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ನೀಲೇಶ್ವರ ಪಳ್ಳಿಕೆರೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!