ಚಿಕ್ಕಮಗಳೂರು: ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ವ್ಯಕ್ತಿ ಸಾವು
ಚಿಕ್ಕಮಗಳೂರು: ಸಂಬಂಧಿಕರ ಮನೆಗೆ ಶ್ರಾವಣಕ್ಕೆಂದು ಕಾರಿನಲ್ಲಿ ಹೋಗುವಾಗ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ನಡೆದಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಅರಿಶಿಣಗೆರೆ ಪ್ರಸನ್ನ (51 ವ) ಎಂದು ಗುರುತಿಸಲಾಗಿದೆ. ಪ್ರಸನ್ನ ಅವರು ಕಾರಿನ ಸಮೇತ ಹಳ್ಳಕ್ಕೆ ಬಿದಿದ್ದಾರೆ.
ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.




