February 4, 2026

ವಿಟ್ಲ: ನಿರ್ಜನ ಪ್ರದೇಶದ ಗುಡ್ಡದಲ್ಲಿ ತಲೆ ಬುರುಡೆ, ಎಲುಬು ಪತ್ತೆ: ಸಾರ್ವಜನಿಕರಲ್ಲಿ ಭಾರೀ ಕುತೂಹಲ

0
image_editor_output_image2022263394-1660015487323

ವಿಟ್ಲ: ಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾದ ಘಟನೆ ವಿಟ್ಲ ನೆಕ್ಕರೆ ಕಾಡಿನಲ್ಲಿ ನಡೆದಿದೆ.

ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ತಲೆಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಂಜೆ ವೇಳೆ ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಈ ತಲೆ ಬುರುಡೆ, ಎಲುಬು ಬಟ್ಟೆಗಳು ಕಾಣ ಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಥಳದಲ್ಲಿ ವ್ಯಕ್ತಿಯ ಪಂಚೆ, ಶರ್ಟ್ ಪತ್ತೆಯಾಗಿದ್ದು, ತಲೆ ಬುರುಡೆ ಎಲುಬು ಯಾವ ವ್ಯಕ್ತಿಯದ್ದು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!