ಪೆರುವಾಯಿಯ ಸಾಧಕಿ ನಫೀಸಾ ಹನೀಫ್ ಗೆ ಯುಎಇಯಲ್ಲಿ ಸನ್ಮಾನ ಕಾರ್ಯಕ್ರಮ
ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ, ಸ್ವಚ್ಛ ವಾಹಿನಿಯ ಚಾಲಕಿಯಾಗಿ ಕಾರ್ಯನಿರ್ವಹಿಸಿದ ಜನ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಕಾರಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮದ ಉಪಾಧ್ಯಕ್ಷೆ ನಫೀಸಾ ಹನೀಫ್ ಅವರನ್ನು ಅಲ್ -ಅಮೀನ್ ಪೆರುವಾಯಿ ಯುಎಇ ಸಮೀತಿ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಸದಾ ಸಮಾಜಮುಖಿ ,ಸಮುದಾಯ ಅಭಿವೃದ್ಧಿ ಕಾಯಕ್ರಮಗಳೊಂದಿಗೆ ಮುನ್ನಡೆಯುತ್ತಿರುವ ಅಲ್-ಅಮೀನ್ ಪೆರುವಾಯಿ ಯುಎಇ ಸಮೀತಿಯು ಸಂಘಟನೆಯ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ ಅತಿಥಿ ಗೌರವ ಅರ್ಪಣೆಯ ಬಾಗವಾಗಿ ಮಹಿಳಾ ಸಾಧಕಿ,ಇತೀಚಿನ ದಿನಗಳ ಹಿಂದೆ ಕರ್ನಾಟಕ ಘನ ಸರಕಾರದ ಮುಖ್ಯಮಂತಿಯಿಂದ ಪ್ರಶಂಸೆಗೆ ಒಳಪಟ್ಟ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನಫೀಸಾ ಹನೀಫ್ ಅವರನ್ನು ಅಲ್ ಅಮೀನ್ ಯುಎಇ ಸಮೀತಿ ಯಿಂದ ಸನ್ಮಾನ ಕಾಯಕ್ರಮ ಶಾರ್ಜಾ ದ ಮೂಸಾ ಸೇನರಪಾಲು ಅವರ ಮೈಝನ್ ನಿವಾಸದಲ್ಲಿ ನಡೆಯಿತು.
ಸಮಿತಿಯ ಗೌರವ ಅಧ್ಯಕ್ಷರಾದ ಇಬ್ರಾಹಿಂ ಮುಚ್ಚಿರಪದವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿಗಳಾದ ಹಾಜಿ ಹಮೀದ್ ದೈಗೋಳಿ ದುಃವಾ ದ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಲ್ ಅಮೀನ್ ಯುಎಇ ಸಮಿತಿ ಅಧ್ಯಕ್ಷರಾದ ರಿಯಾಝ್ ಮುಚ್ಚಿರಪದವು , ಕೋಶಾಧಿಕಾರಿ ಮೂಸಾ ಸೇನರಪಾಲು , ಆರಿಫ್ ಕುಂಬಳಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು . ನೆರೆದ ಎಲ್ಲಾರನ್ನು ಸಿದ್ದಿಕ್ ಸಾಗ್ ವಂದಿಸಿದರು . ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಸಂಘಟನೆಯ ಮಾಜಿ ಅಧ್ಯಕ್ಷರಾದ ರಶೀದ್ ಸೆನೇರಪಾಲು ನೆರವೇರಿಸಿದರು.





