August 25, 2026

ಮಂಗಳೂರು: ಬೈಕ್ ನಲ್ಲಿ ಯುವಕರಿಗೆ ಡಬಲ್ ರೈಡ್ ಹೋಗೋದಕ್ಕೆ ಅವಕಾಶವಿಲ್ಲ: ಕಾನೂನು ಸುವ್ಯವಸ್ಥೆ ಕಾಪಾಡಲು ದ.ಕ.ದಲ್ಲಿ ಹೊಸ ನಿಯಮ

0
image_editor_output_image1764405902-1659601347864

ಸುರತ್ಕಲ್ : ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ನಿಷೇಧಾಜ್ಮೆ ಜಾರಿ ವಿಚಾರಕ್ಕೆ ಸಂಬಂಧಿಸಿ ಸಂಜೆ 6 ರಿಂದ ಮುಂಜಾನೆ 6 ವರೆಗೆ ಹೇರಲಾಗಿದ್ದ ನಿಷೇಧಾಜ್ಮೆ ಸಡಿಲಿಕೆಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಹಂತ ಹಂತವಾಗಿ ನಿಷೇಧಾಜ್ಞೆ ಸಡಿಲಗೊಳಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಎಡಿಜಿಪಿ ಸೂಚನೆ ನೀಡಿದ್ದಾರೆ. ಆ.೫ ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.ಆ.೫ ರ ಬಳಿಕ ಹಂತಹಂತವಾಗಿ ನಿಷೇಧಾಜ್ಮೆ ಸಡಿಲಿಕೆಗೆ ಸೂಚನೆ ನೀಡಲಾಗಿದೆ.

ಸಡಿಲಿಕೆ ಬಳಿಕ ಒಂದು ವಾರ ಕಾಲ ಬೈಕ್ ನಲ್ಲಿ ಯುವಕರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ.
ಈ ವೇಳೆ ಮಕ್ಕಳ, ಮಹಿಳೆಯರು ಹಾಗೂ ಹಿರಿಯರ ನಾಗರಿಕರಿಗೆ ಬೈಕ್ ನಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಯುವಕರು ಹಿಂಬದಿ ಸವಾರಿ ಮಾಡದಂತೆ ಸೂಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಆದೇಶ ಹೊಡಿಸುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು
ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಈ ನಿಯಮ ಜಾರಿಯಲ್ಲಿರಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!