March 26, 2026

ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲು ಕುಸಿತ: ದೇವಾಲಯ ಪ್ರವೇಶ‌ ನಿರ್ಬಂಧ

0
image_editor_output_image-939128950-1659501453962.jpg

ಹಾಸನ: ಜಿಲ್ಲೆಯಲ್ಲಿ‌‌ ಮಂಗಳವಾರ‌ ರಾತ್ರಿ ಧಾರಾಕಾರ‌ ಮಳೆ ಮುಂದುವರಿದಿದೆ.

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲುಗಳು ಮಳೆಯಿಂದಾಗಿ ಸಡಿಲಗೊಂಡು ಬಿದ್ದಿವೆ. ಕೆಲವು ಕಲ್ಲುಗಳು ಮೆಟ್ಟಿಲ‌ಕೆಳಗೆ ಬಿದ್ದಿದ್ದು,‌ಯಾವುದೇ ಅನಾಹುತ ಆಗಿಲ್ಲ.‌‌ ಸದ್ಯಕ್ಕೆ‌‌ ದೇವಾಲಯ ಪ್ರವೇಶ‌ ನಿರ್ಬಂಧಿಸಲಾಗಿದೆ.

ಶ್ರವಣಬೆಳಗೊಳದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಒಳಚರಂಡಿ ತುಂಬಿ ರಸ್ತೆಗಳು ಹಳ್ಳದಂತಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಜನತೆ ಆತಂಕದಲ್ಲಿದ್ದಾರೆ.

ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲೂ‌ ಧಾರಾಕಾರ ಮಳೆಯಾಗಿದೆ.

Leave a Reply

Your email address will not be published. Required fields are marked *

error: Content is protected !!