ಕಾಪು: ಭಜರಂಗದಳದ ಮುಖಂಡನಿಗೆ ಜೀವಬೆದರಿಕೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
ಕಾಪು: ಕಾಪು ಪ್ರಖಂಡ ಭಜರಂಗದಳ ಸಂಚಾಲಕ ಸುಧೀರ್ ಅಲಿಯಾಸ್ ನಾಮ ಸುಧೀರ್ ಇವರಿಗೆ ಜೀವಬೆದರಿಕೆ ಒಡ್ಡಿದ ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಕಾಪು ಚಂದ್ರನಗರದ ನಿವಾಸಿಯಾದ ಅಶ್ರಫ್ ಯಾನೆ ಆಸಿ ಮತ್ತು ಸೋಯೆಬ್ ಮತ್ತವರ ತಂಡ ತನ್ನ ಮನೆಗೆ ನುಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಶಿರ್ವ ಠಾಣೆಗೆ ದೂರು ನೀಡಿದ್ದರು.
ಸುಧೀರ್, ಕಾಪು ಭಜರಂಗದಳ ಸಂಚಾಲಕ
ಅಶ್ರಫ್ ಈ ಹಿಂದೆ ಹಲವಾರು ಪ್ರಕಣಗಳಲ್ಲಿ ಭಾಗಿಯಾಗಿರುವುದರಿಂದ ಆತನನನು ಕೂಡಲೆ ಬಂಧಿಸಿ ಕಾನೂಕ್ರಮ ಜರುಗಿಸಬೇಕೆಂದು ಪೋಲಿಸರಿಗೆ ಮನವಿಮಾಡಿದ್ದರು. ಆರೋಪಿಗಳಾದ ಅಶ್ರಫ್ ಮತ್ತು ಸೋಯೆಬ್ ರವರನ್ನು ಬಂಧಿಸಿದ ಶಿರ್ವ ಪೋಲಿಸರು ಸೋಮವಾರ ಸಂಜೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಉಡುಪಿ ನ್ಯಾಯಾಲಯ ಆರೊಪಿಗಳಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.





