ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಿ: ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ವಿನಂತಿ
ಉಡುಪಿ: ಜಿಲ್ಲೆಯಲ್ಲಿ ನಡಯುತ್ತಿರುವ ಅಹಿತಕರ ಘಟನೆಗಳು ಖಂಡನೀಯ ಮತ್ತು ವಿಷಾದನೀಯ. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳದಿರಿ, ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕೆಂದು ಉಡುಪಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ವಿನಂತಿ ಮಾಡಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ, ಗೃಹ ಇಲಾಖೆ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಈಗ ನಡೆದಿರುವ ಮೂವರು ಅಮಾಯಕರ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿರುವ ಖಾಝಿ, ಸಂಬಂಧಪಟ್ಟ ನಾಯಕರು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಶಾಂತಿಯ ಸಂದೇಶವನ್ನು ನೀಡಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.




