ಯಾವುದೇ ಮೆರವಣಿಗೆ ಇಲ್ಲದೆ, ಶಾಂತಿಯುತವಾಗಿ ಅಂತಿಮ ವಿಧಿಗಳನ್ನು ನೆರವೇರಿಸುತ್ತೇವೆ: ಮುಸ್ಲಿಂ ಮುಖಂಡರು
ಸುರತ್ಕಲ್: ಗುರುವಾರ ರಾತ್ರಿ ಹತ್ಯೆಯಾಗಿರುವ ಮಹಮ್ಮದ್ ಫಾಝಿಲ್ (23) ಮೃತದೇಹವನ್ನು ಮಂಗಳಪೇಟೆಯ ಮುಹಿದ್ದೀನ್ ಜುಮ್ಮಾ ಮಸೀದಿಗೆ ತರಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆಯಿಂದ ವಾಹನದಲ್ಲಿ ಮೃತದೇಹವನ್ನು ಮಸೀದಿ ಆವರಣಕ್ಕೆ ತರಲಾಯಿತು. ‘ಯಾವುದೇ ಮೆರವಣಿಗೆ ಇಲ್ಲದೆ, ಶಾಂತಿಯುತವಾಗಿ ಅಂತಿಮ ವಿಧಿಗಳನ್ನು ನೆರವೇರಿಸುತ್ತೇವೆ’ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.
ಪೊಲೀಸರ ಸೂಚನೆಯಂತೆ ಶವ ಕೊಂಡೊಯ್ದ ಮಾರ್ಗದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ಸುರತ್ಕಲ್ ಪೇಟೆ ಸಹಜ ಸ್ಥಿತಿಯಲ್ಲಿದ್ದು, ಬಸ್ ಸಂಚಾರ ಎಂದಿನಂತೆ ಇದೆ.




