ಮಿಗ್-21 ಲಘು ವಿಮಾನ ಅಪಘಾತ: ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ ಮೃತ್ಯು
ನವದೆಹಲಿ:ಮಿಗ್ 21 ತರಬೇತು ಲಘು ವಿಮಾನ ಅಪಘಾತಕ್ಕೀಡಾಗಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ರಾಜಸ್ಥಾನದ ಬರ್ಮರ್ ನಲ್ಲಿ ನಡೆದಿದೆ.
ಮಿಗ್ 21 ವಿಮಾನವು ಉತರ್ಲೈ ವಾಯು ನೆಲೆಯಿಂದ ಹೊರಟಿದ್ದು, ರಾತ್ರಿ 10ಗಂಟೆ ಹೊತ್ತಿಗೆ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವುದಾಗಿ ಐಎಎಫ್ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.