March 26, 2026

ಕೋಮು ಸಂಘಟನೆಗಳ ಮೇಲಾಟದಿಂದ ಅಮಾಯಕರ ಹತ್ಯೆ ಆಗುತ್ತಿದೆ. ಎಚ್ ಮಹಮ್ಮದ್ ಅಲಿ

0
image_editor_output_image926227603-1658977246352

ಸುಳ್ಯ : ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಕೆಲವೇ ದಿನಗಳಲ್ಲಿ 2 ಯುವಕರ ಕೊಲೆ ನಡೆದಿದೆ, ಇಂತಹ ಕೃತ್ಯವನ್ನು ನಾಗರಿಕ ಸಮಾಜ ತೀವ್ರವಾಗಿ ಖಂಡಿಸಬೇಕು,ಈ ಕೊಲೆಗಳಿಗೆ ಕೋಮು ಸಂಘಟನೆಗಳ ಮೇಲಾಟವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದ್ ಅಲಿ ಆರೋಪಿಸಿದರು

ಯುವಕರಲ್ಲಿ ಕೋಮು ಆಫೀಮನ್ನು ತುಂಬಿಸಿ ಅಮಾಯಕ ಯುವಕರನ್ನು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿ ಅವರ ಬಾಳನ್ನು ಹಾಳು ಮಾಡುತ್ತಿರುವ ಹಾಗೂ ಧರ್ಮದ ಹೆಸರಲ್ಲಿ ಕೊಲೆ ನಡೆಸುತ್ತಿರುವ ಧರ್ಮಾಧಾರಿತವಾದ ಎಲ್ಲಾ ಸಂಘಟನೆಗಳನ್ನು ಬಗ್ಗು ಬಡಿಯ ಬೇಕು
ಬಾಳಿ ಬದುಕ ಬೇಕಾದ ಯುವ ಪ್ರಾಯದ ,ಪ್ರವೀಣ್ ಹಾಗೂ ಮಸೂದ್ ರನ್ನು ಕೊಲೆ ಮಾಡಿದ ಪಾತಕಿಗಳಿಗೆ ಕಠಿಣ ಶಿಕ್ಷೆ ಯಾಗಬೇಕು ಇಂತಹ ಕೊಲೆ ಘಟುಕ ಸಂಘಟನೆಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದರು

ಇಂತಹ ಕೊಲೆಗಳಾದಾಗ ರಾಜಕೀಯ ಲಾಭ ಕೆಲವು ಪಕ್ಷಗಳಿಗೆ ಆಗಬಹುದು, ಆದರೆ ಮಕ್ಕಳನ್ನ ಕಳಕೊಂಡ ನೋವು, ನಷ್ಟ ಅವರ ಹೆತ್ತವರಿಗೆ ಮತ್ತು ಕುಟುಂಬಕ್ಕೆ ಮಾತ್ರ..

ಇದನ್ನೂ ಎಲ್ಲರೂ ತಿಳಿದು ಕೊಳ್ಳಬೇಕು ಹಾಗೂ ಇಂತಹ ಕೋಮು ಸಂಘಟನೆಗಳಿಗೆ ಸೇರಿ ತಮ್ಮಮಕ್ಕಳು ದಾರಿ ತಪ್ಪದಂತೆ ನೋಡಿ ಕೊಳ್ಳುವ ಜವಾಬ್ದಾರಿ ಪೋಷಕರು ಹಾಗೂ ಕುಟುಂಬಸ್ಥರದ್ದಾಗಿರುತ್ತದೆ ಎಂದು ಮಹಮ್ಮದ್ ಅಲಿ ಯವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!