July 21, 2026

ಬಿ ಸಿ ರೋಡ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್: ಸಾಲುಗಟ್ಟಿ ನಿಂತ ವಾಹನಗಳು-ಪರದಾಟ

0
image_editor_output_image-1343148384-1784525853990

ಬಂಟ್ವಾಳ : ಬಂಟ್ವಾಳದ ಬಿಸಿರೋಡಿನ ಎನ್.ಜಿ. ಸರ್ಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಗುಂಡಿಯಿಂದಾಗಿ ಸೋಮವಾರ ಬೆಳಿಗ್ಗೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಯಿತು. ಕೆ.ಎನ್.ಆರ್.ಸಿ. ಕಂಪೆನಿ ನಡೆಸುತ್ತಿರುವ ಕಾಮಗಾರಿಯ ಪರಿಣಾಮ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿದ್ದು, ಇದು ಟ್ರಾಫಿಕ್ ದಟ್ಟಣೆಗೆ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯ ಮಧ್ಯಭಾಗದಲ್ಲಿ ವಾಹನಗಳ ವೇಗ ಕುಂಠಿತಗೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಉಭಯ ದಿಕ್ಕುಗಳಲ್ಲೂ ಉದ್ದವಾದ ವಾಹನಗಳ ಸರತಿ ಸಾಲು ನಿರ್ಮಾಣವಾಗಿದ್ದು, ಪಾಣೆಮಂಗಳೂರು ಸೇತುವೆಯಿಂದ ಬಿ.ಸಿ.ರೋಡು ಎನ್.ಜಿ. ಸರ್ಕಲ್ ಮೂಲಕ ಧರ್ಮಸ್ಥಳ ರಸ್ತೆಯ ಬೈಪಾಸ್ ವರೆಗೆ ನೂರಾರು ಕಾರುಗಳು, ಬಸ್‌ಗಳು, ಲಾರಿಗಳು ಹಾಗೂ ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು.

ಸೋಮವಾರವಾಗಿದ್ದರಿಂದ ಕಚೇರಿಗಳಿಗೆ ತೆರಳುವ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು. ಮಾಹಿತಿ ತಿಳಿದುಹರಸಾಹಸಪಟ್ಟರುಿಸಿದ ಟ್ರಾಫಿಕ್ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಲು ಹರಸಾಹಸಪಟ್ಟರ

ವಾಹನಗಳನ್ನು ಹಂತ ಹಂತವಾಗಿ ಬಿಡಿಸುವ ಮೂಲಕ ಸಂಚಾರವನ್ನು ನಿಯಂತ್ರಿಸಲು ಪ್ರಯತ್ನಿಸಿದ ಪರಿಣಾಮ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದ್ದು, ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಮಗಾರಿ ಸಂಸ್ಥೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!