ದುಬೈ: ಐಟಿ ಮೆನೇಜರ್ ಆಗಿ ನಿಯುಕ್ತಿ:
ಹನೀಫ್ ಪುತ್ತೂರು ಅವರಿಗೆ ಎಂ ಫ್ರೆಂಡ್ಸ್ ವತಿಯಿಂದ ಸನ್ಮಾನ
ದುಬೈ: ಯುಎಇಯ ಪ್ರತಿಷ್ಟಿತ ಸರಕಾರಿ ಸಂಸ್ಥೆ ದುಬೈ ಯುನಿವರ್ಸಿಟಿಯಲ್ಲಿ ಮುಂಭಡ್ತಿ ಪಡೆದು ಐಟಿ ಮೆನೇಜರ್ ಆಗಿ ನಿಯುಕ್ತರಾದ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಎನ್ನಾರೈ ಸದಸ್ಯರಾದ ಹನೀಫ್ ಪುತ್ತೂರು ಅವರನ್ನು ಎಂ.ಫ್ರೆಂಡ್ಸ್ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರು ಬುಧವಾರ (27/07) ದುಬೈಯ ಇಂಟರ್ ನ್ಯಾಶನಲ್ ಸಿಟಿಯಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಎಂ.ಫ್ರೆಂಡ್ಸ್ ನ ಅಶ್ರಫ್ ಅಬ್ಬಾಸ್ ಕುಂಜತ್ತೂರು, ರಫೀಕ್ ಕಲ್ಲಡ್ಕ ಉಪಸ್ಥಿತರಿದ್ದರು.






