March 26, 2026

ವಿಟ್ಲ: ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಮತ್ತು ಇಂಟರಾಕ್ಟ್ ಕ್ಲಬ್ ಉದ್ಘಾಟನೆ

0
IMG-20220727-WA0212.jpg

ವಿಟ್ಲ: ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಮತ್ತು ಇಂಟರಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಸಹಾಯಕ ಗವರ್ನರ್, ಮಂಜುನಾಥ ಆಚಾರ್ಯ ಉದ್ಘಾಟಿಸಿದರು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.‌ ವನಸಿರಿ ಕಾರ್ಯಕ್ರಮದಡಿ ಗಿಡ ವಿತರಣೆ, ಬಡಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ನಿವೃತ್ತ ಸೈನಿಕ‌ ದಾಸಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.‌

ಇಂಟರಾಕ್ಟ್ ಕ್ಲಬ್ ಉದ್ಘಾಟಿಸಲಾಯಿತು.‌ ಇಂಟರಾಕ್ಟ್ ಅಧ್ಯಕ್ಷರಾಗಿ ಅಂಕಿತ ಮತ್ತು ಕಾರ್ಯದರ್ಶಿಯಾಗಿ ಪ್ರತ್ವಿರಾಜ ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ, ನಿಕಟಪೂರ್ವ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ವಿಠಲ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಪ್ರಶಾಂತ್, ರೋಟರಿ ಕ್ಲಬ್ ನ ಡಾ. ವಿ.ಕೆ ಹೆಗ್ಡೆ, ಡಾ.ಚರಣ್ ಕಜೆ, ಜೈಕಿಶನ್ ಮೋಹನ್ ಮೈರ, ದಿನೇಶ್ ಮಾಡ್ತಾರು, ಮಂಜುನಾಥ ಶೆಟ್ಟಿ, ತೌಸಿಫ್, ಉಬೈದ್, ದಾಸಪ್ಪ ಪೂಜಾರಿ ಭಾಗವಹಿಸಿದ್ದರು.
ಭಾಸ್ಕರ್ ಶೆಟ್ಟಿ, ಸಂಜೀವ ಪೂಜಾರಿ, ರಮೇಶ್ ಬಿ.ಕೆ ವಿವಿಧ ಜವಾಬ್ದಾರಿ ನಿಭಾಯಿಸಿದರು.

Leave a Reply

Your email address will not be published. Required fields are marked *

error: Content is protected !!